ತುಂಬೆ ಡ್ಯಾಮ್ -ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸ್ಥಳ ಸಮೀಕ್ಷೆ…

ಬಂಟ್ವಾಳ: ತುಂಬೆ ಡ್ಯಾಮ್ ಮುಳುಗಡೆ ಭೂಮಿಯ ವರತೆ ಪ್ರದೇಶಕ್ಕೆ ನ್ಯಾಯೋಚಿತ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸ್ಥಳ ಸಮೀಕ್ಷೆ ಮಾಡಲು ಬಂಟ್ವಾಳ ತಾಸಿಲ್ದಾರ್ ಡಾ ಸ್ಮಿತಾ ರಾಮ್ ಹಾಗೂ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳು, ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಭೂಮಾಪನ ಇಲಾಖೆಯವರೊಂದಿಗೆ ಸಜೀಪ ಮುನ್ನೂರು ಗ್ರಾಮಕ್ಕೆ ಆ. 22 ರಂದು ಭೇಟಿ ನೀಡಿದರು. ತುಂಬೆ ಡ್ಯಾಮ್ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್ ಕೆ ಇದಿನಬ್ಬ, ಸಜೀಪ ಮುನ್ನೂರು ಗ್ರಾಮ ಕರಣಿಕರಾದ ಕುಮಾರಿ ಸ್ವಾತಿ ಮೊದಲಾದವರು ಉಪಸ್ಥಿತರಿದ್ದರು.

IMG 20220823 WA0000 300x138

Related Articles