ಅರಂತೋಡು- ಸಯ್ಯದ್ ಪಾಣಕ್ಕಾಡ್ ತಂಙಳ್ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ…

ಸುಳ್ಯ :ಅರಂತೋಡು ತೆಕ್ಕಿಲ್ ಪ್ರತಿಷಾನದ ಅಧ್ಯಕ್ಷ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್ ರವರ ನಿವಾಸಕ್ಕೆ ಕೇರಳ ರಾಜ್ಯ ಮುಸ್ಲಿಂ ಲೀಗ್ ಉಸ್ತುವಾರಿ ಸಮಿತಿ ಸದಸ್ಯರಾದ ಬಹು।ಪಾಣಕ್ಕಾಡ್ ಸಯ್ಯದ್ ಸಾದಿಕಾಲಿ ಶಿಹಾಬ್ ತಂಙಳ್ ಭೇಟಿ ನೀಡಿ ತೆಕ್ಕಿಲ್ ಪ್ರತಿಷ್ಠಾನದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .
ಪಾಣಕ್ಕಾಡ್ ಸಯ್ಯದ್ ಸಾದಿಕಾಲಿ ಶಿಹಾಬ್ ತಂಙಳ್ ಅವರನ್ನು ಟಿ.ಎಮ್ .ಶಹೀದ್ ರವರು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿದರು . ಈ ಸಂದರ್ಭದಲ್ಲಿ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು।ಅಲ್ಹಾಜ್ ಇಸ್ಹಾಖ್ ಬಾಖವಿ, ಟಿ.ಎಮ್ .ಬಾಬಾ ಹಾಜಿ ತೆಕ್ಕಿಲ್ ,ಟಿ.ಎಮ್.ಶಾಝ್ ತೆಕ್ಕಿಲ್,ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ,ಟಿ.ಎಮ್.ಜಾವೇದ್,ತೆಕ್ಕಿಲ್,ಕೆ.ಎಮ್ ಸಿಸಿ ನೌಶಾದ್ ಬೆಂಗಳೂರು ,ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ.ಶಫೀಖ್ , ಸುಳ್ಯ ತಾಲ್ಲೂಕು ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ,ಪೇರಡ್ಕ ಮಸೀದಿಯ ಕಾರ್ಯದರ್ಶಿ ಹಾಜಿ ಅಬ್ದುಲ್ ರಝಾಖ್ ತೆಕ್ಕಿಲ್ ಮೊಟ್ಟಂಗಾರ್, ಅಬೂಬಕ್ಕರ್ ಪಾರೆಕ್ಕಲ್,ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಕೆ.ಎಮ್.ಮುಸ್ತಫಾ ಸುಳ್ಯ ,ಮಾಜಿ ನಗರ ಪಂಚಾಯತ್ ಅಧ್ಯಕ್ಷ ಸಂಸುದ್ದೀನ್ ,ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ಸ್, ಸಿದ್ದೀಖ್ ಕೊಕ್ಕೊ, ತಾಜುದ್ದೀನ್ ಟರ್ಲಿ, ಜುನೈದ್ ಗೂನಡ್ಕ ಮುಂತಾದವರು ಉಪಸ್ಥಿತರಿದ್ದರು .ಸ್ಥಳೀಯ ಮಸೀದಿ ಖತೀಬರಾದ ಬಹು ಅಲ್ಹಾಜ್ ಇಸ್ಹಾಖ್ ಬಾಖವಿಯವರು ತಂಙಳರನ್ನು ಪರಿಚಯಿಸಿದರು.

25de0fd7 0ce4 409a B271 F7f8e7379c2c 300x225

C46707b5 85fe 4afd Ab12 Ef4baa318620 289x300

Related Articles

Leave a Reply

Your email address will not be published. Required fields are marked *