VK ಜೋಡಿ ತಾರೆ ಕರ್ನಾಟಕದ ಬೆಸ್ಟ್ ಜೋಡಿ ಸ್ಪರ್ಧೆ – ವಿಜೇತ ಕೃಷ್ಣರಾಜ್ ಪೂರ್ಣಿಮಾ ದಂಪತಿಗಳಿಗೆ ಸನ್ಮಾನ…

ಸುಳ್ಯ: ವಿಜಯ ಕರ್ನಾಟಕ ಪತ್ರಿಕೆಯ ಆಯೋಜಿಸಿದ VK ಜೋಡಿ ತಾರೆ ಕರ್ನಾಟಕದ ಬೆಸ್ಟ್ ಜೋಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡ ಕೃಷ್ಣರಾಜ್- ಪೂರ್ಣಿಮಾ ದಂಪತಿಗಳನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾ. 8 ರಂದು ಕೇರ್ಪಳದ ಅಂಗನವಾಡಿ ಶಾಲೆಯಲ್ಲಿ ಸನ್ಮಾನಿಸಲಾಯಿತು.
ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್, ಸುಪ್ರೀತ್ ಮೋಂಟಡ್ಕ, ಸಂಜೀವ ಟೈಲರ್ ಕೇರ್ಪಳ ,ಮಂಜು ಮೇಸ್ತ್ರಿ , ಶಾಫಿ ಕುತ್ತಮೊಟ್ಟೆ, ಶ್ರೀಮತಿ ಲತಾ ಕೇರ್ಪಳ, ಸಾನ್ವಿ P.N, ಸುಮತಿ , ಅಂಗನವಾಡಿ ಟೀಚರ್ ಕವಿತಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಜೇತ ಕೃಷ್ಣರಾಜ್ ಹಾಗೂ ಪೂರ್ಣಿಮಾ ಕೃಷ್ಣರಾಜ್ ಅನುಭವವನ್ನು ಹಂಚಿಕೊಂಡರು.ಕವಿತಾ ಸ್ವಾಗತಿಸಿದರು. ರಿಯಾಜ್ ಕಟ್ಟೆಕಾರ್ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button