ಪಾಣಕ್ಕಾಡ್ ಸಯ್ಯದ್ ಹೈದರಾಲಿ ಶಿಹಾಬ್ ತಂಙಳ್ ರವರ ನಿಧನ ದೇಶಕ್ಕೆ ತುಂಬಲಾರದ ನಷ್ಟ- ಟಿ ಎಂ ಶಾಹೀದ್ ತೆಕ್ಕಿಲ್…

ಸುಳ್ಯ: ಪಾಣಕ್ಕಾಡ್ ಸಯ್ಯದ್ ಹೈದರಾಲಿ ಶಿಹಾಬ್ ತಂಙಳ್ ರವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಕಾಂಗ್ರೇಸ್ ಮುಖಂಡ ಟಿ ಎಂ ಶಾಹೀದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಾತ್ಯತೀತ ತತ್ವ , ಸಹೋದರತೆ, ಸಹಬಾಳ್ವೆಗೆ ಮಾದರಿಯಾದ ತಂಙಳ್ ರವರು ಸರಳ ಜೀವನ ಮತ್ತು ಆದರ್ಶಕ್ಕೆ ಮಾದರಿಯಾಗಿದ್ದರು. ಅವರ ನಿಧನದಿಂದಾಗಿ ಸಮಾಜಕ್ಕೂ, ವೈಯುಕ್ತವಾಗಿ ತನಗೂ ತುಂಬಲಾರದ ನಷ್ಟ ಎಂದು ಟಿ ಎಂ ಶಾಹೀದ್ ತೆಕ್ಕಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿ ಎಂ ಶಾಹೀದ್ ತೆಕ್ಕಿಲ್