ಸಮಸ್ತ ಪಬ್ಲಿಕ್ ಪರೀಕ್ಷೆ – ಕಲ್ಲುಗುಂಡಿ ಮದ್ರಸಕ್ಕೆ ಶೇಕಡಾ 100 ಫಲಿತಾಂಶ, ನಿಹಾ ಫಾತಿಮಾ ಸುಳ್ಯ ತಾಲೂಕಿಗೆ ದ್ವಿತೀಯ…

ಸುಳ್ಯ : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಇತ್ತೀಚೆಗೆ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಕಲ್ಲುಗುಂಡಿ ಮದ್ರಸಕ್ಕೆ ಶೇಕಡಾ100 ಫಲಿತಾಂಶ ಬಂದಿರುತ್ತದೆ.
5ನೇ ತರಗತಿಯಲ್ಲಿ ಮುನೀರ್ ಕೆ.ಎಂ ರವರ ಪುತ್ರಿ ನಿಹಾ ಫಾತಿಮಾ ಡಿಸ್ಟಿಂಕ್ಷನ್ ನೊಂದಿಗೆ ಸುಳ್ಯ ರೇಂಜ್ ಹಾಗೂ ತಾಲೂಕಿನಲ್ಲಿ ದ್ವಿತೀಯ ಹಾಗೂ ಮೂಸಾನ್ ಟರ್ಲಿ ರವರ ಪುತ್ರ ಮುಹಮ್ಮದ್ ಯಾಸೀನ್ ಡಿಸ್ಟಿಂಕ್ಷನ್ ನೊಂದಿಗೆ ತಾಲೂಕಿನಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.
5ನೇ ತರಗತಿಯ 13, 7ನೇ ತರಗತಿಯ 9 ಹಾಗೂ 10ನೇ ತರಗತಿಯ 5 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣಗೊಂಡಿರುತ್ತಾರೆ.

IMG 20220421 WA0013 179x300

Related Articles