ಏ. 26 – ಬೆಳ್ತಂಗಡಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಭೆ…

ಮಂಗಳೂರು: ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ (ಗ್ರಾಮೀಣ) ಜಿಲ್ಲಾ ಪಂಚಾಯತಿ ವ್ಯಾಪ್ತಿಗಳಲ್ಲಿ ಬರುವ ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರು, ಪ್ರಮುಖ ನಾಯಕರು, ಕಾರ್ಯಕರ್ತರ ಜೊತೆ ಕ್ಷೇತ್ರವಾರು ಸಭೆಯನ್ನು ಏ. 26 ರಂದು ಹಮ್ಮಿಕೊಂಡಿರುತ್ತಾರೆ.
ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್, ಮಾಜಿ ಶಾಸಕರಾದ ವಸಂತ ಬಂಗೇರ, ಮಾಜಿ ಸಚಿವರಾದ ಗಂಗಾಧರ ಗೌಡ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕರಾದ ಶ್ರೀ ಸುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು ರವರು ಹಾಗೂ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ (ಗ್ರಾಮೀಣ)ಯ ಅಧ್ಯಕ್ಷರಾದ ರಂಜನ್ ಜಿ. ಗೌಡ ರವರು ಭಾಗವಹಿಸಲಿದ್ದಾರೆ.
ಬೆಳ್ತಂಗಡಿ ಬ್ಲಾಕ್ (ಗ್ರಾಮೀಣ) ವ್ಯಾಪ್ತಿಯ ಆಯಾ ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಗ್ರಾಮ ಪಂಚಾಯತ್‍ನ ಚುನಾಯಿತ ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಎಲ್ಲಾ ಮಾಜಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಸದಸ್ಯರು ಮತ್ತು ಗ್ರಾಮ ಸಮಿತಿ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Mlc3 Scaled E1650859070913 300x110

Related Articles