ಹರ್ಯಾಣ ಮುಖ್ಯಮಂತ್ರಿಯಾಗಿ ಮನೋಹರ ಲಾಲ್ ಖಟ್ಟರ್ ಪ್ರಮಾಣ ವಚನ ಸ್ವೀಕಾರ….

ಚಂಢೀಗಡ: ಹರ್ಯಾಣದ ಮುಖ್ಯಮಂತ್ರಿ ಆಗಿ 2ನೇ ಅವಧಿಗೆ ಮನೋಹರ ಲಾಲ್ ಖಟ್ಟರ್ ಹಾಗೂ ಉಪಮುಖ್ಯಮಂತ್ರಿಯಾಗಿ ಜನ ನಾಯಕ್ ಜನತಾ ಪಕ್ಷದ ದುಷ್ಯಂತ್ ಚೌಟಾಲ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಹರ್ಯಾಣ ಗವರ್ನರ್ ಸತ್ಯದೇವ್ ನಾರಾಯಣ ಆರ್ಯ ಪ್ರಮಾಣ ವಚನ ಬೋಧಿಸಿದರು.
90 ಸದಸ್ಯ ಬಲದ ಹರ್ಯಾಣ ವಿಧಾನಸಭೆಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚನೆಗೆ ಆರು ಸ್ಥಾನಗಳ ಕೊರತೆ ಇತ್ತು. ಇದೀಗ ಆರು ಪಕ್ಷೇತರರು ಸೇರಿದಂತೆ ಜೆಜೆಪಿಯೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ, ಶಿರೋಮಣಿ ಅಕಾಲಿ ದಳ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಮತ್ತಿತರರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

EH34lWUU8AA7EMG 300x169

Related Articles

Leave a Reply

Your email address will not be published. Required fields are marked *