ಸಂಪಾಜೆ ಪೇರಡ್ಕ ಗೂನಡ್ಕ ಮಸೀದಿಯಲ್ಲಿ ಸಂಭ್ರಮದ ಈದ್- ವಿಶ್ವ ಶಾಂತಿಗಾಗಿ ವಿಶೇಷ ಪ್ರಾರ್ಥನೆ…
ಸುಳ್ಯ: ಪವಿತ್ರ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಪೇರಡ್ಕ ಗೂನಡ್ಕ ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ಖತೀಬರಾದ ನಹೀಂ ಫೈಝಿ ಅಲ್ ಮಹಬರಿ ಈದುಲ್ ಫಿತ್ರ ಸಂದೇಶ ನೀಡಿ ಸರ್ವರಿಗೂ ಶುಭಾಶಯ ತಿಳಿಸಿದರು.
ನಂತರ ಖಬರಸ್ಥಾನ ಮತ್ತು ಪೆರಡ್ಕ ಗೂನಡ್ಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನೆರೆವೇರಿಸಿ ಲೋಕದಲ್ಲಿ ಎಲ್ಲರಿಗೂ ಶಾಂತಿ ಮತ್ತು ನೆಮ್ಮದಿ ದೊರಕಲಿ ಮರುಭೂಮಿಯ ಅನುಗ್ರಹ ಶಾಶ್ವತವಾಗಿರಲಿ. ದೇಶದ ಪ್ರಜೆಗಳು ಶಾಂತಿ ಸೌಹಾರ್ದತೆ ಐಕ್ಯತೆಯಿಂದ ಬಾಳಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು, ಪೇರಡ್ಕ ಗೂನಡ್ಕ ಮೋಹಿಯಾದ್ಫಿನ್ ಜುಮಾ ಮಸೀದಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಎಂ ಆರ್ ಡಿ ಎ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಟಿ ಬಿ ಹನೀಫ್ ತೆಕ್ಕಿಲ್ ,ಟಿ ಎಂ ಮೊಹಮದ್ ಕುನ್ನಿ ತೆಕ್ಕಿಲ್ ,ಪಿ ಕೆ ಉಮ್ಮರ್ ಗೂನಡ್ಕ ,ಸಿನಾನ್ ಗೂನಡ್ಕ,ಮೊಯಿದು ಗೂನಡ್ಕ, ಎ ಉಸ್ಮಾನ್ ,ಪಾಂಡಿ ಉಸ್ಮಾನ್,ಬಾತಿಷ ತೆಕ್ಕಿಲ್ ಸೆಟ್ಟಿಯಡ್ಕ ,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಮುನೀರ್ ದಾರಿಮಿ ,ಸಾಜಿದ್ ಐ ಜಿ,ಅಬ್ದುಲ್ ಖಾದರ್ ಮೊಟ್ಟಮ್ಗಾರ್ ,ಸಬ್ ಇನ್ಸ್ಪೆಕ್ಟರ್ ಸಾದಿಕ್ ಸಂಟ್ಯಾರ್ ಪೇರಡ್ಕ,ಹಾರಿಸ್ ಮುಸ್ಲಿಯಾರ್ ,ತಾಲ್ಲೂಕು ಕಚೇರಿ ಸಿಬ್ಬಂದಿ ರಜಾಕ್ ಸಹಿತ ಹಲವರು ಉಪಸ್ಥಿತರಿದ್ದು ಈದ್ ಶುಭಾಶಯ ವಿನಿಮಯ ಮಾಡಿದರು.








