ರಾಜೀವ್ ಗಾಂಧಿ ಗ್ರಾಮಿಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ನಾರಾಯಣ ಸ್ವಾಮಿ ಮತ್ತು ತಂಡ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ…

ಸುಳ್ಯ: ತೆಕ್ಕಿಲ್ ಪ್ರತಿಷ್ಠಾನಕ್ಕೆ ಮಾಜಿ ಸಂಸದರು, ರಾಜೀವ್ ಗಾಂಧಿ ಗ್ರಾಮಿಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್, ಎ. ಐ. ಸಿ. ಸಿ. ಕಾರ್ಯದರ್ಶಿ ಸಂದೀಪ್ ಗೌಡ, ಮಾಜಿ ಶಾಸಕ ಬಿ,ಆರ್ ಪಾಟೀಲ್ ಹಾಗೂ ಸಂಡೂರ್ ರಾಜ ಮನೆತನದ ಎಂ. ಐ. ಘೋರ್ಪಡೆ ಭೇಟಿ ನೀಡಿ ತೆಕ್ಕಿಲ್ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಸ್ಥಾಪಕಾಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್ ರವರು ಅತಿಥಿಗಳಿಗೆ ಪೇಟ ತೊಟ್ಟು, ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ,ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಅಬೂಸಾಲಿ ಗೂನಡ್ಕ, ರಾಜ್ಯ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಯೋಜಕ ತಾಜ್ ಮಹಮ್ಮದ್ ಸಂಪಾಜೆ, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಕಲ್ಲುಗುಂಡಿ, ಅಲ್ಪ ಸಂಖ್ಯಾತರ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಎಸ್.ಪಿ.ಅಬ್ದುಲ್ ರಹಿಮಾನ್ ಸಂಪಾಜೆ, ರಹೀಮ್ ಬೀಜದಕಟ್ಟೆ , ಕೆ ಅಶ್ರಫ್ ಗೂನಡ್ಕ, ಅಝರ್ ದರ್ಖಾಸ್, ಅರಂತೋಡು ಅನ್ವಾರುಲ್ ಹುದಾ ಅಸೋಸಿಯೇಶನ್ ಅಧ್ಯಕ್ಷ ಎಸ್. ಎಂ. ಅಬ್ದುಲ್ ಮಜೀದ್ , ಎ. ಹನೀಫ್ ಅರಂತೋಡು, ಹಾಜಿ ಅಜಾರುದ್ದೀನ್ ಆರಂತೋಡು , ಸೈಫುದ್ದೀನ್ ಪಠೇಲ್, ಕೆ. ಎಂ. ಅಬೂಬಕ್ಕರ್ ಪಾರೆಕ್ಕಲ್, ಮುಜೀಬ್ ಆರಂತೋಡು, ಝಕೀರ್ ಪಾಲಡ್ಕ, ಜುಬೈರ್ ಎಸ್. ಇ, ತಾಜುದ್ದೀನ್ ಆರಂತೋಡು, ಆರಿಫ್ ದರ್ಖಾಸ್, ಮುಝುಮ್ಮಿಲ್ ಕುಕ್ಕುಂಬಳ ಮೊದಲದವರು ಉಪಸ್ಥಿತರಿದ್ದರು.

Cc04aea2 17fa 4a7d 8b29 A6ea5e105855 300x225 961c57d7 018a 487f 982e 4302df175555 300x225 275d43e8 553f 4b2e A09b 94536bb45d0e 300x225

Related Articles