ಗೋವಿಂದ ಭಟ್ ಕಲ್ಲಡ್ಕ ನಿಧನ…

ಬಂಟ್ವಾಳ, ಮಾ. 31:ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಆರಂಭದಿಂದ 30 ವರ್ಷಕ್ಕೂ ಮಿಕ್ಕಿ ಹಿಂದಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಗೋವಿಂದ ಭಟ್ ಕೆ.(75ವರ್ಷ) ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ‌ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.
ವಿದ್ಯಾರ್ಥಿಗಳಿಗೆ ಯಕ್ಷಗಾನದ ಗುರುಗಳಾಗಿ ಪೌರಾಣಿಕ ಪ್ರಸಂಗಗಳ ಬಗ್ಗೆ ವಿಶೇಷ ‌ಅನುಭವ ಹೊಂದಿದ್ದರು.ಮಕ್ಕಳ ತಂಡಕಟ್ಟಿ ಪ್ರದರ್ಶನ ಮಾಡಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯಕಾರ್ಯಕರ್ತರಾಗಿದ್ದು ಹಲವು ಜಬಾಬ್ದಾರಿಗಳನ್ನು ನಿರ್ವಹಿಸಿದ್ದರು. ಬಾಳ್ತಿಲ ಕಾಂಪ್ರಬೈಲಿನಲ್ಲಿ ವಾಸವಾಗಿದ್ದು, ಕೃಷಿಕರಾಗಿಯೂ ಜನಾನುರಾಗಿಯಾಗಿದ್ದರು.

Related Articles

Back to top button