ಮಂಜಲ್ ಪಾದೆ ಪ್ರೀಮಿಯರ್ ಲೀಗ್ ಸೀಸನ್ 4 ಕ್ರಿಕೆಟ್ ಪಂದ್ಯಾಟ…
ಬಂಟ್ವಾಳ: ನೇತ್ರಾವತಿ ಬಳಗ ಮಂಜಲ್ಪಾದೆ ವತಿಯಿಂದ ಮಂಜಲ್ ಪಾದೆ ಪ್ರೀಮಿಯರ್ ಲೀಗ್ ಸೀಸನ್ 4 ಕ್ರಿಕೆಟ್ ಪಂದ್ಯಾಟವನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕ್ರೀಡೆಯಿಂದ ಶಾರೀರಿಕ ಮಾನಸಿಕ ಬೆಳವಣಿಗೆ ಆಗುವುದರೊಂದಿಗೆ ಒಗ್ಗಟ್ಟು, ಸಮಯೋಚಿತ ನಡೆ, ಹೊಂದಾಣಿಕೆಯ ಮನೋ ಸ್ಥಿತಿ ಉತ್ತಮಗೊಳ್ಳುವುದು. ಯುವಜನರು ಒಳ್ಳೆಯ ಆದರ್ಶ ಜೀವನವನ್ನು ನಡೆಸುವಂತೆ ಕರೆ ನೀಡಿದರು ಬಂಟ್ವಾಳ ಸಮಾಜ ಸೇವಾ ಬ್ಯಾಂಕ್ ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ ಯುವಜನತೆ ದುಶ್ಚಟಗಳಿಗೆ ಬಲಿ ಬೀಳದೆ ಸಾಮಾಜಿಕ ಚಟುವಟಿಕೆಗಳು ನಡೆಸುವುದರ ಮೂಲಕ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ ಎಂದರು. ವಿಷ್ಣುವರ್ಧನ ದೇವಸ್ಥಾನದ ಅರ್ಚಕ ಕೇಶವ ಭಟ್, ಪ್ರೇಮ ಜಿ ಶೆಟ್ಟಿ, ಭಜನಾ ಮಂದಿರದ ಅಧ್ಯಕ್ಷ ಸತೀಶ್ ಗಟ್ಟಿ, ಶಾರದಾ ಯುವಕ ಸಂಘದ ಅಧ್ಯಕ್ಷ ಯೋಗೇಶ್, ನೇತ್ರಾವತಿ ಬಳಗ ಮಂಜಲ್ ಪಾದೆ ಅಧ್ಯಕ್ಷ ಶ್ರೇಯಸ್ ಗಟ್ಟಿ, ಹಿಂದೂ ಜಾಗರಣ ವೇದಿಕೆ ಮಂಗಳೂರು ಮಹಾನಗರ ಸುರೇಂದ್ರ ಅಮೀನ್, ಪರಮೇಶ್ವರ ಪೂಜಾರಿ, ಧರ್ಣಪ್ಪ ಗಟ್ಟಿ, ವಾಸು ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.





