ಎಸ್‌ಎಸ್‌ಎಲ್‌ಸಿ ಫಲಿತಾಂಶ – ಮಹಮ್ಮದ್ ನಿಹಾದ್ ಗೆ 84.16% ಅಂಕ…
ಸುಳ್ಯ : ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ನಿಹಾದ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 84.16% ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಮಹಮ್ಮದ್ ನಿಹಾದ್ ಅವರು ಅಜ್ಜಾವರ ಗ್ರಾಮದ ಗುಳುಂಬು ನಿವಾಸಿಗಳಾದ ಅಬ್ದುಲ್ಲಾ ಎಸ್.ಎಂ. ಹಾಗೂ ಫೌಝಿಯಾ ದಂಪತಿಗಳ ಪುತ್ರರಾಗಿದ್ದಾರೆ. ಅವರ ಈ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.


