ಎಸ್‌ಎಸ್‌ಎಲ್‌ಸಿ ಪರೀಕ್ಷೆ- ಮೊಹಮ್ಮದ್ ಮುಝಮಿಲ್ ಗೆ 83.2% ಅಂಕ…
ಸುಳ್ಯ :ಸಂಪಾಜೆ ಗ್ರಾಮದ, ಆಲಡ್ಕದ ನಿವಾಸಿಗಳಾದ ಯೂಸಫ್ ಬಿ ಎ ಮತ್ತು ಅಬೀದಾ ಈ ದಂಪತಿಗಳ ಮಗನಾದ ಮೊಹಮ್ಮದ್ ಮುಝಮಿಲ್ ಇವರು ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ ಇಲ್ಲಿಯ ವಿದ್ಯಾರ್ಥಿಯಾಗಿದ್ದು, 2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 520 (ಶೇ 83.2) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದು ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿ ತಂದಿರುತ್ತಾನೆ.
ಇವರಿಗೆ ಶಾಲಾ ಸಂಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್, ವ್ಯವಸ್ಥಾಪಕರಾದ ಅಬ್ದಲ್ಲಾ ಮಾಸ್ಟರ್ ನಿವೃತ್ತ ಮುಖ್ಯ ಶಿಕ್ಷಕರು ಅರಂತೋಡು, ಸಲಹಾ ಸಮಿತಿಯ ಸದಸ್ಯರಾದ ದಾಮೋದರ ಮಾಸ್ಟರ್, ದಿನಕರ ಸಣ್ಣಮನೆ, ಖಾದರ್ ಮೊಟ್ಟೆಂಗಾರ್ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಸಂಪತ್ ಜೆ ಡಿ ಶಿಕ್ಷಕ ವೃಂದದವರಾದ ಸಾಧಿಕ ಎ ಕೆ, ಆಯಿಷತ್ ನುಸೈಭಾ, ಬುಶ್ರಾ ಕೆ ಎಂ, ಕೈರುನ್ನೀಸ ಎಸ್ ಇ, ಸೋನಿಯಾ ಪಿ ಬಿ, ಆಯಿಷತ್ ಇಶಾನಾ, ಆಯಿಷತ್ ಸುನೈನಾ ಇವರು ಅತಿ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಯು ಒಳಗೊಂಡಂತೆ ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಭವಿಷ್ಯದ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.
ಕಳೆದ 20 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ವಿವಿಧ ಉನ್ನತವಾದ ಸ್ಥಾನಗಳಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಆ ನಿಟ್ಟಿನಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಇವರ ಕಾರ್ಯ ಯೋಜನೆಗಳು ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಸಾಧನೆ ಮಾಡಲು ಸಾಧ್ಯವಾಗಿದೆ.
ಇಂದಿನ SSLC ವಿದ್ಯಾರ್ಥಿಗಳ ಸತತ 7ನೇ ಬಾರಿಯ 100% ಫಲಿತಾಂಶವು ನಮ್ಮಶಾಲೆಯು ನೀಡುತ್ತಿರುವ ಗುಣಾತ್ಮಕ ಶಿಕ್ಷಣಕ್ಕೆ ಒಂದು ನಿದರ್ಶನವಾಗಿದೆ.




