ಕರಾವಳಿ ಕಾಂಪ್ಲೆಕ್ಸ್ ನಲ್ಲಿ ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್ ಶುಭಾರಂಭ…

ಡ್ರೈ ಫ್ರೂಟ್ಸ್ ಕೊoಬೊ ಆಫರ್ ನಲ್ಲಿ ಲಭ್ಯ...

ಸುಳ್ಯ :ಸುಳ್ಯ ಮೆಗಾ ಶಾಪ್ ಬಳಿ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ನವಾಜ್ ಬೆಳ್ಳಾರೆಯವರ ಮಾಲಕತ್ವದ ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್ ಶೋ ರೂಮ್ ಉದ್ಘಾಟನೆಗೊಂಡಿ ರುತ್ತದೆ.
ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ಉದ್ಘಾಟಿಸಿದರು.ಮುಖ್ಯ ಅತಿಥಿ ಗಳಾಗಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ , ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ಹೇಮಂತ್ ಕಾಮತ್, ಯುವ ಉದ್ಯಮಿ ರಂಜಿತ್ ಕುರುಂಜಿ ಭಾಗ್, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರು ಗಳಾದ ಉಮ್ಮರ್ ಕೆ. ಎಸ್, ಸಿದ್ದೀಕ್ ಕೊಕ್ಕೊ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಜನತಾ ಗ್ರೂಪ್ಸ್ ನ ಅಬ್ದುಲ್ ಮಜೀದ್, ಅನಿವಾಸಿ ಉದ್ಯಮಿ ಗಳಾದ ಹಾಜಿ ಎಸ್. ಎಂ ಅಬ್ದುಲ್ ಹಮೀದ್, ಅಬ್ದುಲ್ ರೆಹ್ಮಾನ್ ಎಸ್ ಎಂ, ಮಹಮೂದ್ ಬೆಳ್ಳಾರೆ, ಶುಕೂರ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ನವಾಸ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಯುವಕರು ಉದ್ಯಮ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಲು ಸಲಹೆ ನೀಡಿ ನವಾಸ್ ಅವರು ತಯಾರಿಸುವ ವಿವಿಧ ಬಗೆಯ ಪಾನೀಯಗಳ ಮಾದರಿಯನ್ನು ಶ್ಲಾಘಿಸಿದರು.
ಉದ್ಘಾಟನೆ ಯ ಅಂಗವಾಗಿ ಎಲ್ಲಾ ರೀತಿಯ ಡ್ರೈ ಫ್ರೂಟ್ಸ್ ಒಳಗೊಂಡ ಕೊoಬೊ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಅಂಗಡಿ ಮಾಲಕ ನವಾಜ್ ಬೆಳ್ಳಾರೆ ತಿಳಿಸಿರುತ್ತಾರೆ.

whatsapp image 2026 04 24 at 9.53.13 am

Related Articles

Back to top button