ಬಂಟ್ವಾಳ ನೇತ್ರಾವತಿ ಸಂಗಮದ ಪದಗ್ರಹಣ ಸಮಾರಂಭ…

ಬಂಟ್ವಾಳ, ಮೇ. 19:ವಿದ್ಯಾವಂತ ಜನರೇ ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಪಾಲುದಾರರಾಗುವುದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು  ನಿಸ್ವಾರ್ಥವಾಗಿ ನಿರಂತರ ಸೇವಾಕಾರ್ಯಗಳನ್ನು ನಡೆಸುತ್ತಿದ್ದು ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದು ಉದ್ಯಮಿ ಸುಜೀರುಗುತ್ತು ಐತ್ತಪ್ಪ ಆಳ್ವ ಹೇಳಿದರು.
ಅವರು ಬಿಸಿರೋಡಿನ ಅಕ್ಷಯ ಸೌಧ ಸಭಾಂಗಣದಲ್ಲಿ ಜರಗಿದ ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನೂತನ ಅಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿಯವರಿಗೆ ಪ್ರಮಾಣ ವಚನ ನೀಡಿ ರಾಷ್ಟ್ರೀಯ ಉಪಾಧ್ಯಕ್ಷೆ ಅಕ್ಷತಾ ಆರ್. ಮಾತನಾಡಿ ತಮ್ಮ ಅನುಭವ ಹಾಗೂ ನಾಯಕತ್ವ ಗುಣಗಳನ್ನು ಸಮಾಜದ ಒಳಿತಿಗೆ ಉಪಯೋಗಿಸಬೇಕೆಂದರು.
ಅಧಿಕಾರ ಸ್ವೀಕರಿಸಿ ಸಭೆಯ ಅಧ್ಯಕ್ಷತೆವಹಿಸಿದ ತಾರಾನಾಥ ಕೊಟ್ಟಾರಿ ಮಾತನಾಡಿ ಸಕಾರಾತ್ಮಕ ಚಿಂತನೆಯಿಂದ ಸಂಘಟನೆಯೊಂದಿಗೆ ಸಂಸ್ಕಾರವಂತರಾಗಿ ಇತರರಿಗೆ ಮಾದರಿಯಾಗಬೇಕಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ನೇತ್ರಾವತಿ ಸಂಗಮದ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ ಹಾಗೂ ನಿಕಟ ಪೂರ್ವ ಕಾರ್ಯದರ್ಶಿ ನ್ಯಾಯವಾದಿ ಶೈಲಜಾ ರಾಜೇಶ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧಕ ವಿದ್ಯಾರ್ಥಿಗಳಾದ ಇಶಾ ಅನ್ವಿ, ಪೂರ್ವಿ ಜೆ.ಬಂಗೇರ, ಅನರ್ಘ್ಯ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.
ಎಸ್ ಎಸ್ ಎಲ್ ಸಿ ಹಾಗೂ ಪಿ ಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ಅನನ್ಯ ಭಟ್, ಶ್ರೀರಕ್ಷಾ ರಾವ್,ಜಿಶಾ ಪಿ, ತುಷಾರ್ ಹೆಚ್ ಪಿ, ಶಾನೆಲ್ ಸಿಕ್ವೆರಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ ನೂತನ ಕಾರ್ಯದರ್ಶಿ ರೇಖಾ ರಾವ್, ಕೋಶಾಧಿಕಾರಿ ಪಿ. ಮುಹಮ್ಮದ್, ನಿಕಟ ಪೂರ್ವ ಕೋಶಾಧಿಕಾರಿ ಹರಿಶ್ಚಂದ್ರ ಆಳ್ವ ಪಿ. ಉಪಸ್ಥಿತರಿದ್ದರು.
ರಾಜಾರಾಮ ಐತಾಳ್, ಗಿರಿಧರ್ ಗೌಡ, ರಾಮಕೃಷ್ಣ ರಾವ್, ಪ್ರಮೀಳಾ ಮಾಣೂರು, ಗ್ರೇಸಿ ಮೇಬಲ್ ಲಾಸ್ರದೋ, ಅಶೋಕ್ ಕುಮಾರ್ ಬರಿಮಾರು ನೂತನ ಸದಸ್ಯರಾದರು.
ಪ್ರಮುಖರಾದ ಮಾಜಿ ಅಧ್ಯಕ್ಷ ಡಾ. ಆನಂದ ಬಂಜನ್, ಉಪಾಧ್ಯಕ್ಷ ಪುರುಷೋತ್ತಮ ಕೊಟ್ಟಾರಿ,ಪ್ರಗತಿಪರ ಕೃಷಿಕ ಕರುಣೆಂದ್ರ ಪೂಜಾರಿ,ಜಯ ಗಣೇಶ್,ಸಚ್ಚಿದಾನಂದ ರೈ,ಸುಭಾಸ್ಚಂದ್ರ ಜೈನ್, ಯೋಗೀಶ್ ಬಂಗೇರ,ಪ್ರದೀಪ್ ರಾಜ್ ಕಾರ್ಕಳ, ಹರೀಶ್ ರೈ ,ನವೀನ್ ,ವಿಜಯ ಕುಮಾರ್ ಅಡ್ಯಾರ್ ಮತ್ತಿತರರಿದ್ದರು.
ನಿಕಟಪೂರ್ವ ಅಧ್ಯಕ್ಷ ಆದಿರಾಜ ಜೈನ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸನ್ಮತಿ ಜೈನ್ ಇಂದ್ರ ಸನ್ಮಾನ ಪತ್ರ ವಾಚಿಸಿದರು. ರಕ್ಷಾ ಪ್ರಾರ್ಥಿಸಿ ಅಕ್ಬರ್ ಅಲಿ ವಂದಿಸಿದರು. ರೇಖಾ ರಾವ್ ಕಾರ್ಯಕ್ರಮ ನಿರೂಪಿಸಿದರು.

whatsapp image 2026 05 19 at 5.12.17 pm

Related Articles