ಶಾಹುಲ್ ಹಮೀದ್ ಕುತ್ತಮೊಟ್ಟೆ ಹಜ್ ಯಾತ್ರೆ -ಗ್ಯಾರಂಟಿ ಸಮಿತಿ ವತಿಯಿಂದ ಬೀಳ್ಕೊಡುಗೆ, ಸ್ನೇಹ ಕೂಟ…

ಸುಳ್ಯ : ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರು ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ವತಿಯಿಂದ ಬೀಳ್ಕೊಡುವ ಸಮಾರಂಭ ಮತ್ತು ಸ್ನೇಹ ಕೂಟ ಏರ್ಪಡಿಸಲಾಗಿತ್ತು.
ಗ್ಯಾರಂಟಿ ಸಮಿತಿಯ ಕಚೇರಿ ಯಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಜನಪ್ರತಿನಿದಿಗಳು, ಅಧಿಕಾರಿಗಳು ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುoಡೋಡಿ ಮಾತನಾಡಿ
ಯಾತ್ರೆ ಗೆ ತೆರಳುವವರಿಗೆ ಶುಭ ವಿದಾಯ ಏರ್ಪಡಿಸುವುದಕ್ಕೆ ಭಾರತೀಯ ಸಂಸ್ಕೃತಿ ಯಲ್ಲಿ ಮಹತ್ವದ ಸ್ಥಾನವಿದೆ. ತನ್ನ ಧರ್ಮವನ್ನು ಪ್ರೀತಿಸಿ ಅನುಸರಿಸುವುದರೊಂದಿಗೆ ಇತರ ಧರ್ಮ ಮತ್ತು ಅದರ ಆಚರಣೆ ಯನ್ನು ಗೌರವಿಸಬೇಕು. ಶಾಹುಲ್ ಹಮೀದ್ ರವರ ಸಮಾಜ ಮುಖಿ ಕಾರ್ಯ ಅಭಿನಂದನೀಯ ಎಂದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ವಿಷಯ ಪ್ರಸ್ತಾವನೆ ಮಾಡಿದರು. ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಅಡ್ವೋಕೇಟ್ ಮೂಸ ಪೈoಬಚ್ಚಾಲ್, ಭವಾನಿ ಶಂಕರ್ ಕಲ್ಮಡ್ಕ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಶುಭ ಹಾರೈಸಿ ಮಾತನಾಡಿದರು.
ಶಶಿಧರ್ ಎಂ. ಜೆ. ಕಾರ್ಯಕ್ರಮ ನಿರೂಪಿಸಿದರು. ಗ್ಯಾರಂಟಿ ಸಮಿತಿ ಸದಸ್ಯರು, ತಾಲೂಕು ಪಂಚಾಯತ್ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.




