ಕೇರಳಂ ನ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಟಿ.ಎಂ. ಶಾಹಿದ್ ತೆಕ್ಕಿಲ್ ಅಭಿನಂದನೆ…

ತ್ರಿವೇಂಡ್ರಮ್ : ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇರಳಂ ಮುಖ್ಯಮಂತ್ರಿ ಹಾಗೂ ತಮ್ಮ ಆತ್ಮೀಯ ಸ್ನೇಹಿತರಾದ ವಿ.ಡಿ. ಸತೀಶನ್ ಅವರನ್ನು ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ತ್ರಿವೇಂಡ್ರಮ್ ನ ಸೆಕ್ರಟ್ರಿಯೇಟ್ ನಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿಯಾಗಿ ಅಭಿನಂದಿಸಿದರು.
ಕೇರಳ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದರು.
ಈ ಭೇಟಿಯ ಸಂದರ್ಭದಲ್ಲಿ ಸಿ ಎಂ ಪಿ ಧುರೀಣ ಅಬ್ದುಲ್ ಹಮೀದ್ ಬಾಪೂಟಿ ಟಿ.ಎಂ. ಶಾಜ್ ತೆಕ್ಕಿಲ್, ಟಿ.ಎಂ. ಶೈನ್ ತೆಕ್ಕಿಲ್, ಟಿ.ಎಂ. ಶಯಾನ್ ತೆಕ್ಕಿಲ್ ಹಾಗೂ ಎಂ.ಎ. ಅಫ್ತಾಬ್ ಮುನಂಬತ್ ಮೊದಲಾದವರು ಉಪಸ್ಥಿತರಿದ್ದರು.





