ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ…

ಬಿ.ಸಿ.ರೋಡ್ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ 2026–28ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆಯು ಸಂಘದ ಕಚೇರಿಯಲ್ಲಿ ಆದಿತ್ಯವಾರ ನಡೆಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಬಿ. ರಮೇಶ್ ಸಾಲಿಯಾನ್ ಸಂಚಯಗಿರಿ** ಅವರು ದ್ವಿತೀಯ ಬಾರಿಗೆ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಸತೀಶ್ ಸಂಪಾಜೆ, ಉಪಾಧ್ಯಕ್ಷ ಗಣೇಶ್ ಮರ್ದೋಳಿ, ಜತೆಕಾರ್ಯದರ್ಶಿಗಳಾಗಿ ಜಯಂತ್ ಬಂಗೇರ ವಗ್ಗ ಹಾಗೂ ಪ್ರೇಮಾ ಜನಾರ್ಧನ್ ಪೊಸಳ್ಳಿಆಯ್ಕೆಯಾದರು. ಕೋಶಾಧಿಕಾರಿ ಸೋಮನಾಥ್ ಸಾಲಿಯಾನ್,* ಸಂಘಟನಾ ಕಾರ್ಯದರ್ಶಿಯಾಗಿ ಆಶಾ ಗಿರಿಧರ್, ಸೇವಾದಳಪತಿಯಾಗಿ ಚಂದ್ರಶೇಖರ್**, ಮಹಿಳಾ ಸಂಘದ ಅಧ್ಯಕ್ಷೆಯಾಗಿ ವಾರಿಜಾ ಚೇತನ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಚ್ಚೇಂದ್ರ ಸಾಲಿಯಾನ್, ಜಲಜಾಕ್ಷಿ ಕುಲಾಲ್, ಜನಾರ್ಧನ ಬೊಂಡಾಲ, ರಮೇಶ್ ಸಾಲಿಯಾನ್, ಮಾಧವ ಕುಲಾಲ್ ಬಿ.ಸಿ.ರೋಡು, ಕವಿತಾ ಯಾದವ್, ಸುರೇಶ್ ಕುಲಾಲ್ ಬಂಟ್ವಾಳ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬಂಟ್ವಾಳ ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರುಗೊಳಿಸುವಲ್ಲಿ ಶ್ರಮವಹಿಸಿದ ಕಟ್ಟಡ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಅವರನ್ನು ಅಭಿನಂದಿಸಲಾಯಿತು.

Related Articles