ಕರ್ನಾಟಕ ಪ್ರೌಢ ಶಾಲೆ ಮಾಣಿ- ಶಾಲಾ ಸರಕಾರದ ಮಂತ್ರಿಗಳ ಪ್ರಮಾಣ ವಚನ, ವಿವಿಧ ಸಂಘಗಳ ಉದ್ಘಾಟನೆ, ಮತ್ತು ಪ್ರತಿಭಾ ಕಲರವ ಕಾರ್ಯಕ್ರಮ…

ಬಂಟ್ವಾಳ : ಜೀವನದಲ್ಲಿ ಶಿಸ್ತು, ಸಂಯಮ, ಪರಿಶ್ರಮ ಇದ್ದರೆ ಬದುಕು ಸುಂದರ ಇಲ್ಲವಾದರೆ ಅರ್ಥಹೀನ, ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ನಿರಂತರ ಎಂದು
ನಿವೃತ್ತ ಭೂಸೇನಾ ಯೋಧ ಹಾಗೂ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಮಾಧವ ಕುಲಾಲ್ ಪಾಳ್ಯ ನುಡಿದರು.
ಅವರು ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ನಡೆದ ವಿವಿಧ ಸಂಘಗಳ ಉದ್ಘಾಟನೆ, ಮಂತ್ರಿಗಳ ಪ್ರಮಾಣವಚನ, ಪ್ರತಿಭಾ ಕಲರವ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು.
ಶಾಲಾ ನಾಯಕಿಯಾಗಿ ನೆಫಿಸತ್ ಮಿಶ್ರಿಯ, ಉಪನಾಯಕಿ ತೃಪ್ತಿ, ವಿಪಕ್ಷ ನಾಯಕಿ ಶ್ರುತಿಜ, ವಿಪಕ್ಷ ಉಪನಾಯಕ ಗಗನ್, ಕ್ರೀಡಾ ಮಂತ್ರಿ ಮುಹಮ್ಮದ್ ರಿಫಾಯ್, ಸಾಂಸ್ಕೃತಿಕ ಮಂತ್ರಿ ಸಂಭ್ರಮ್, ಶಿಸ್ತು ಮಂತ್ರಿ ಎಸ್.ಎ. ಮೊಹಮ್ಮದ್ ರಾಫಿ, ಶಿಕ್ಷಣ ಮಂತ್ರಿ ಅಫ್ಶೀನ್ ರಫಾತ್, ಆರೋಗ್ಯ ಮಂತ್ರಿ ಕೌಶಿಕ್ , ಆಹಾರ ಮಂತ್ರಿ ಫಾತಿಮತ್ ರಿಫಾ, ಸ್ವಚ್ಛತಾ ಮಂತ್ರಿ ಫಾತಿಮತ್ ಸುಹಾನ, ನೀರಾವರಿ ಮಂತ್ರಿ ರೋಹಿತ್ ಎಂ.ಕೆ., ಕೃಷಿ ಮಂತ್ರಿ ಮುಹಮ್ಮದ್ ಶಮ್ಮಾಸ್ ಪ್ರಮಾಣ ವಚನ ಕೈಗೊಂಡರು.

ಇದೇ ಸಂದರ್ಭದಲ್ಲಿ ವಿವಿಧ ಸಂಘಗಳಿಗೆ ಅಧ್ಯಕ್ಷ – ಕಾರ್ಯದರ್ಶಿ – ಖಜಾಂಚಿ ನೇಮಕ ಮಾಡಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರೊ. ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಹಾಜಿ ಕೆ ಇಬ್ರಾಹಿಂ, ಶಿಕ್ಷಕ-ರಕ್ಷಕ
ಸಂಘದ ಅಧ್ಯಕ್ಷೆ ಕೃತಿಕ, ಹಾಗೂ ಇತರರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ ಸ್ವಾಗತಿಸಿ ಹಿರಿಯ ಶಿಕ್ಷಕಿ ಶ್ಯಾಮಲಾ ಕೆ. ಪ್ರಮಾಣ ವಚನ ಬೋಧಿಸಿ, ವಂದಿಸಿ, ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ
ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles