ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಆಸ್ತಿ -ಸುಕನ್ಯಾ ಬೈಪಡಿತ್ತಾಯ…
ಸುಳ್ಯ : ಕಸ್ತೂರಿಬಾ ಮಹಿಳಾ ಮಂಡಲದ ವತಯಿಂದ ಮಾ.10 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಮಹಿಳಾ ಸಾಧಕಿ ಶ್ರೀಮತಿ ಸುಕನ್ಯಾ ಬೈಪಡಿತ್ತಾಯ ಅವರು ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಬೆಳೆಯಬೇಕಾದರೆ ಬರೀ ಹಣ ಇದ್ದರೆ ಸಾಲದು. ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಆಸ್ತಿ. ಶಿಕ್ಷಣವು ಆತ್ಮ ವಿಶ್ವಾಸವನ್ನು ತುಂಬುವಂತೆ ಮಾಡುತ್ತದೆ. ಹೆಣ್ಣುಮಕ್ಕಳಿಗೆ ಮಾತ್ರ ಸಮಾಜದಲ್ಲಿ ಬದುಕುವುದನ್ನು ಕಲಿಸಿದರೆ ಸಾಲದು, ಗಂಡು ಮಗುವಿಗೂ ಸಹ ಹೆಣ್ಣುಮಗುವನ್ನು ಗೌರವಿಸುವ ಗುಣವನ್ನು ತಾಯಿಯೇ ಕಲಿಸಿಕೊಡುವಂತೆ ಕಿವಿ ಮಾತನ್ನು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಕನ್ಯಾ ಬೈಪಡಿತ್ತಾಯ ಅವರು ಮಾಡಿದ ಸಾಧನೆಗಾಗಿ ಅಭಿನಂದಿಸಲಾಯಿತು.
ಕಸ್ತೂರಿಬಾ ಮಹಿಳಾ ಮಂಡಲದ ಅಧ್ಯಕ್ಷರಾದ ವಾರಿಜಾ ವೇಣುಗೋಪಾಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಸ್ತೂರಿಬಾ ಮಹಿಳಾ ಮಂಡಲದ ಸುಂದರಿ,ಗೀತಾಸುಧಾಮ,ಸುಮನಾಕೃಪಾಶಂಕರ್ ಉಪಸ್ಥಿತರಿದ್ದರು. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಸ್ಪರ್ಧೆಯ ವಿಜೇತರಿಗೆ ಬಹಮಾನಗಳನ್ನು ವಿತರಿಸಲಾಯಿತು. ಶ್ರೀಮತಿ ಲೀಕ್ಷಿತಾ ಕೊನ್ನೋಡಿ ಇವರ ಪ್ರಾರ್ಥಿಸಿದರು. ಶ್ರೀಮತಿ ಪೂರ್ಣಿಮಾ ಕುಂಚಡ್ಕ ಇವರು ಸ್ವಾಗತಿಸಿ, ಜಾನಕಿ ಮೈಂದೂರ್ ಇವರು ಧನ್ಯವಾದಗೈದರು. ಜಯಲಕ್ಷ್ಮಿ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು.