ಆರೋಗ್ಯ ತಪಾಸಣೆಗೆ ಒಳಪಡುವಂತೆ ಮಸೀದಿ ಮೈಕ್‍ನಲ್ಲಿ ಖಾದರ್ ಮನವಿ….

ಮಂಗಳೂರು: ವಾರದ ಹಿಂದೆ ಸ್ಥಳಿಯ ವ್ಯಕ್ತಿಯೋರ್ವನಿಗೆ ಸೋಕು ದೃಢಪಟ್ಟ ಹಿನ್ನಲೆ ಸುತ್ತಮುತ್ತಲಿನ ಜನರು ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದು ಮಾಜಿ ಸಚಿವ ಯು ಟಿ ಖಾದರ್ ಅವರು ಇಲ್ಲಿನ ಮಸೀದಿ ಮೈಕ್ ಮೂಲಕ ಮನವಿ ಮಾಡಿದ್ದಾರೆ.

ವಾರಗಳ ಹಿಂದೆ ತೊಕ್ಕೊಟ್ಟು ಮೂಲಕ ವ್ಯಕ್ತಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತು. ಆತ ಚೆಂಬುಗುಡ್ಡೆ ಮಸೀದಿಗೆ ಹಲವು ಬಾರಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿರುವ ಹಿನ್ನೆಲೆ ಸುತ್ತಮುತ್ತಲಿನ ಮುಸ್ಲಿಂ ಭಾಂಧವರು‌ ಮತ್ತು ನಾಗರಿಕರಲ್ಲಿ ಶಾಸಕ ಖಾದರ್ ಮನವಿ ಮಾಡಿದರು.

ಆರೋಗ್ಯ ಇಲಾಖೆ ತಂಡದ ಜೊತೆ ಸಹಕರಿಸಬೇಕು. ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಯು ಟಿ ಖಾದರ್ ಮಸೀದಿ ಮೈಕ್ ನಲ್ಲಿ ಮನವಿ ಮಾಡಿದರು. ಸ್ವತಃ ತಾನು ಕೂಡ ತಪಾಸಣೆಗೆ ಒಳಗಾದರು. ಖಾದರ್‌ ಅವರ ಮನವಿ ಹಿನ್ನೆಲೆ ಬಹಳಷ್ಟು ನಾಗರಿಕರು ಸ್ವಯಂ ಪ್ರೇರಿತವಾಗಿ ಆಗಮಿಸಿ ತಪಾಸಣೆಗೆ ಒಳಪಟ್ಟರು.

IMG 20200413 WA0002 300x169

Related Articles

Leave a Reply

Your email address will not be published. Required fields are marked *