ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ…

ಸುಳ್ಯ :ಸುಳ್ಯ ಗ್ರೀನ್ ವ್ಯೂ ಪ್ರಾಥಮಿಕ ಮತ್ತು ಪ್ರೌಢಶಾಲೆ ಯ ಪ್ರಸಕ್ತ ಸಾಲಿನ ಪ್ರಾರಂಭೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಪ್ರಥಮ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಅತಿಥಿಗಳು, ಅಧ್ಯಾಪಕ ವೃಂದ ದವರು ಶಾಲಾ ಪ್ರವೇಶ ದ್ವಾರದಲ್ಲಿ ನಿಂತು ಬರಮಾಡಿಕೊಂಡು
ಮೆರವಣಿಗೆಯಲ್ಲಿ ಬ್ಯಾoಡ್ ವಾದ್ಯಗಳೊಂದಿಗೆ ಶಾಲಾ ವಠಾರಕ್ಕೆ ಕರೆತರಲಾಯಿತು .
ನಂತರ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷ ಕೆ. ಎಂ
ಅಬ್ದುಲ್ ಮಜೀದ್ ವಹಿಸಿದ್ದರು.
ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಯ ವಿಶ್ರಾಂತ ಪ್ರಾoಶುಪಾಲರಾದ ಪ್ರೊಫೆಸರ್ ಯೂಸುಫ್ ಪೈಚಾರ್ ರವರು ಮಾತನಾಡಿ ಜೀವನವೇ ಒಂದು ಪರೀಕ್ಷೆ, ಪ್ರತಿಯೊಬ್ಬ ವಿದ್ಯಾರ್ಥಿ ಗಳಲ್ಲಿ ಪ್ರತಿಭೆ ಅಡಗಿದೆ, ಇನ್ನೊಬ್ಬರನ್ನು ಹೋಲಿಕೆ ಮಾಡದೆ ಸ್ವಂತ ಸಾಮರ್ಥ್ಯ ದಿಂದ ಮುನ್ನುಗ್ಗಿದರೆ ಯಶಸ್ಸು ಖಂಡಿತ ಎಂದರು.
ವೇದಿಕೆಯಲ್ಲಿ ಶಾಲಾ ಸಂಚಾಲಕ, ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ಕನ್ವಿನರ್ ಗಳಾದ ಕೆ. ಎಸ್. ಉಮ್ಮರ್, ಶಾಫಿ ಕುತ್ತಾಮೊಟ್ಟೆ, ಪದಾಧಿಕಾರಿಗಳಾದ ಎಸ್. ಎಂ. ಅಬ್ದುಲ್ ಹಮೀದ್, ಅಬ್ದುಲ್ ಹಮೀದ್ ಜನತಾ,ಮಾಜಿ ಸಂಚಾಲಕ ಕೆ. ಎಂ. ಮುಹಿಯ್ಯದ್ದೀನ್ ಫ್ಯಾನ್ಸಿ,ಎಸ್. ಪಿ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಣ ಸ್ವಾಗತಿಸಿ, ಶಿಕ್ಷಕ ರಂಜಿತ್ ವಂದಿಸಿದರು, ಹಿರಿಯ ಶಿಕ್ಷಕಿ ಜಯಂತಿ ನಿರೂಪಿಸಿದರು.

Whatsapp Image 2026 06 01 At 7.10.54 Pm 300x200

Related Articles