ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಅಭಿಷೇಕ್ ಎಂ ಬಿ ಆಯ್ಕೆ….

ಮಂಗಳೂರು: ಸಂಗೀತ ಮತ್ತು ನೃತ್ಯ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ 2019-20 ನೇ ಸಾಲಿನ ರಾಜ್ಯಮಟ್ಟದ ಶಿಷ್ಯವೇತನಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕೊಳಲು ವಿಭಾಗದಲ್ಲಿ ಮಂಗಳೂರು ಮರೋಳಿಯ ಅಭಿಷೇಕ್ ಎಂ ಬಿ ಇವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಜ.12 ರಿಂದ ಜ. 16 ರ ವರೆಗೆ ಉತ್ತರಪ್ರದೇಶದ ಲಕ್ನೋದ ಇಂದಿರಾಗಾಂಧಿ ಪ್ರತಿಷ್ಟಾನದಲ್ಲಿ ನಡೆದ 23ನೇ ರಾಷ್ಟ್ರೀಯ ಯುವಜನೋತ್ಸವ-2020 ರಲ್ಲಿ ಶಾಸ್ತ್ರೀಯಸಂಗೀತ – ಕೊಳಲು ವೈಯಕ್ತಿಕ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮಸ್ಥಾನವನ್ನು ಪಡೆದಿದ್ದಾರೆ. ಎಂ ಬಾಲಕೃಷ್ಣ ಮತ್ತು ಜಯ ದಂಪತಿಯ ಪುತ್ರನಾದ ಇವರು ವಿದ್ವಾನ್ ರಾಜೇಶ್ ಬಾಗಲೋಡಿ, ಕಲಾತರಂಗಿಣಿ, ಸುರತ್ಕಲ್ ಇವರ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಚೆನ್ನೈನ ವಿದುಷಿ ಶಾಂತಲಾಸುಬ್ರಹ್ಮಣ್ಯಂ ಇವರಲ್ಲಿ ಉನ್ನತ ತರಬೇತಿಯನ್ನು ಪಡೆಯುತ್ತಿದ್ದಾರೆ. ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಇವರಲ್ಲಿ ಮೃದಂಗ ಅಭ್ಯಾಸವನ್ನು ಮಾಡುತ್ತಿದ್ದಾರೆ. ಇವರು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ನ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ.