ವಿಶ್ವ ಬಾಲಕಾಮಿ೯ಕ ಪದ್ದತಿ ವಿರೋಧಿ ದಿನಾಚರಣೆ – ಜನಜಾಗೃತಿ ರಥ ಉದ್ಘಾಟನೆ…
ಬಂಟ್ವಾಳ: ವಿಶ್ವ ಬಾಲಕಾಮಿ೯ಕ ಪದ್ದತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಜನಜಾಗೃತಿ ರಥ ಉದ್ಘಾಟನಾ ಕಾಯ೯ಕ್ರಮಕ್ಕೆ ತಹಶೀಲ್ದಾರ್ ರಶ್ಮಿ ಎಸ್ ಆರ್ ಇಂದು ಚಾಲನೆ ನೀಡಿದರು.
ಬಂಟ್ವಾಳ ಕಾಮಿ೯ಕ ನಿರೀಕ್ಷಕರಾದ ಮೆಲಿ೯ನ್ ಗ್ರೇಸಿ ಇವರು ಕೋವಿಡ್ -19 ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಮಕ್ಕಳನ್ನು ಬಾಲ ಕಾಮಿ೯ಕತೆಯಿಂದ ಮುಕ್ತ ವಾಗಿಸಲು ಹಿಂದಿಗಿಂತಲೂ ಹೆಚ್ಚು ಜಾಗರೂಕತೆ ವಹಿಸಿ ಎಂಬ ಘೋಷಣೆಯನ್ನು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾಮಿ೯ಕರ ನೇಮಕಾತಿ ಶಿಕ್ಷಾಹ೯ ಅಪರಾಧ 14 ವಷ೯ದ ಒಳಗಿನ ಬಾಲ್ಯಾವಸ್ಥೆಯ ಮಕ್ಕಳನ್ನು ಯಾವುದೇ ಸಂಸ್ಥೆ ಗಳಲ್ಲಿ ಹಾಗೂ 15 ವಷ೯ದಿಂದ 18 ವಷ೯ದೊಳಗಿನ ಕಿಶೋರಾವ್ಯಸ್ಥೆಯ ಮಕ್ಕಳನ್ನು ಅಪಾಯಕಾರಿ ಸಂಸ್ಥೆ(ಕಾಖ೯ನೆ)ಗಳಲ್ಲಿ ದುಡಿಸಿಕೊಳ್ಳ ಬಾರದು. ದುಡಿಸಿಕೊಂಡಲ್ಲಿ ಸಾವ೯ಜನಿಕರು ಚೈಲ್ಡ್ ಲೈನ್ ಅಥವಾ ಕಾಮಿ೯ಕ ಇಲಾಖೆಗೆ ಕರೆ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಗಾಯತ್ರಿ ಬಾಯಿ ಹೆಚ್, ಸಿ. ಡಿ. ಪಿ ಒ ಬಂಟ್ವಾಳ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಶಿಕ್ಷಣ ಇಲಾಖೆಯ ವರು, ಎ ಎಸ್ ಐ ಜಯರಾಮ ರೈ, ಕಂದಾಯ ನಿರೀಕ್ಷಕರು, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕರು ಮತ್ತು ತಾಲೂಕು ಕಛೇರಿಯ ಸಿಬ್ಬಂದಿಯವರು ಹಾಜರಿದ್ದರು.