ಗುರುವಾರ – ದ.ಕ 23 , ರಾಜ್ಯದಲ್ಲಿ 210 ಕೊರೋನಾ ಪ್ರಕರಣಗಳು ಪತ್ತೆ…

ಮಂಗಳೂರು: ಇಂದು (ಗುರುವಾರ) ದ.ಕ. ಜಿಲ್ಲೆಯಲ್ಲಿ 23 ಹಾಗೂ ರಾಜ್ಯದಲ್ಲಿ 210 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 236 ಮಂದಿಯ ವರದಿ ನೆಗೆಟಿವ್ ಆಗಿದೆ. ಆರು ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇನ್ನು ಪಾಸಿಟಿವ್ ಪತ್ತೆಯಾದವರ ಪೈಕಿ 21 ಮಂದಿ ಸೌದಿ ಅರೇಬಿಯಾದಿಂದ ಮರಳಿದವರಾಗಿದ್ದಾರೆ. ಉಳಿದ ಇಬ್ಬರಿಗೆ ಸೋಂಕಿತರ ಪ್ರಥಮ ಸಂಪರ್ಕದಿಂದಾಗಿ ಕೊರೊನಾ ತಗುಲಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 210 ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 7944ಕ್ಕೇರಿಕೆಯಾಗಿದೆ.
ಬಳ್ಳಾರಿಯಲ್ಲಿ 48, ಕಲಬುರಗಿಯಲ್ಲಿ 48, ದಕ್ಷಿಣ ಕನ್ನಡದಲ್ಲಿ 23, ರಾಮನಗರದಲ್ಲಿ 21, ಬೆಂಗಳೂರು ನಗರದಲ್ಲಿ 17, ಯಾದಗಿರಿಯಲ್ಲಿ 8, ಮಂಡ್ಯದಲ್ಲಿ 7, ಬೀದರ್ ನಲ್ಲಿ 6, ಗದಗದಲ್ಲಿ 5, ರಾಯಚೂರು, ಹಾಸನ, ಧಾರವಾಡದಲ್ಲಿ ತಲಾ 4, ದಾವಣಗೆರೆ, ಚಿಕ್ಕಮಗಳೂರಿನಲ್ಲಿ 3, ವಿಜಯಪುರ, ಉತ್ತರ ಕನ್ನಡ , ಮೈಸೂರಿನಲ್ಲಿ ತಲಾ 2, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗದಲ್ಲಿ ತಲಾ1 ಪ್ರಕರಣಗಳು ವರದಿಯಾಗಿವೆ.
ಇನ್ನು ಕಾಸರಗೋಡು ಜಿಲ್ಲೆಯಲ್ಲಿ ಇಂದು ಮೂವರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ. 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button