ಜುಲೈ 24, 25 ಮತ್ತು 26 ರಂದು PACE ಟೆಸ್ಟ್- 2020 …

ಮಂಗಳೂರು: ಪಿ.ಎ ಎಂಜಿನಿಯರಿಂಗ್ ಕಾಲೇಜು ಮಂಗಳೂರು, ದೇಶ ಮತ್ತು ವಿದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ವಿದ್ಯಾರ್ಥಿವೇತನ / ಅಣಕು ಪ್ರವೇಶ ಪರೀಕ್ಷೆಗಳ ಸರಣಿ PACE ಟೆಸ್ಟ್ -2020 ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳ ನೈಜ ಅನುಭವವನ್ನು ಹೊಂದಲು ಸಹಾಯ ಮಾಡುತ್ತದೆ ಮತ್ತು ಪಿ.ಎ ಎಂಜಿನಿಯರಿಂಗ್ ಕಾಲೇಜಿನ ವಿವಿಧ ವಿದ್ಯಾರ್ಥಿವೇತನ ಯೋಜನೆಗಳಿಗೆ ಅರ್ಹತೆ ಪಡೆಯಲು ಸಹಕಾರಿ ಆಗಲಿವೆ. ಪೇಸ್ ಟೆಸ್ಟ್ ನ ಮೊದಲ ಹಂತವನ್ನು ಜುಲೈ 24, 25 ಮತ್ತು 26 ರಂದು ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ ನಡೆಸಲಾಗುವುದು. ಕಾಲೇಜಿನ ವೆಬ್ ಸೈಟ್ ನಲ್ಲಿ (www.pace.edu.in) ನೊಂದಾವಣಿ ಮಾಡಿಕೊಂಡು
70 ನಿಮಿಷಗಳ ಪರೀಕ್ಷೆಯನ್ನು ಬರೆಯಬಹುದು. ಹೆಚ್ಚಿನ ಮಾಹಿತಿಗಾಗಿ [email protected] / 9980022000 ಗೆ ಇಮೇಲ್/ ಕರೆಮಾಡಿ ವಿಚಾರಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button