ಶುಕ್ರವಾರ – ದ.ಕ 456 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಶುಕ್ರವಾರ ) ದ.ಕ ಜಿಲ್ಲೆಯಲ್ಲಿ 456 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 456 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19322 ಕ್ಕೆ ಏರಿಕೆಯಾಗಿದೆ. ಇಂದು 11 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಒಟ್ಟು 472 ಮಂದಿ ಬಲಿಯಾಗಿದ್ದಾರೆ.ಇಂದು 340 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 4506 ಸಕ್ರಿಯ ಪ್ರಕರಣಗಳಿವೆ. 456 ಸೋಂಕಿತರ ಪೈಕಿ ಮಂಗಳೂರು ತಾಲೂಕಿನ242 ಮಂದಿಯಲ್ಲಿ , ಬಂಟ್ವಾಳ ತಾಲೂಕಿನಲ್ಲಿ 86 ಮಂದಿಯಲ್ಲಿ, ಪುತ್ತೂರು 27, ಸುಳ್ಯ 26, ಬೆಳ್ತಂಗಡಿ 40 ಹಾಗೂ ಹೊರ ಜಿಲ್ಲೆಗಳ 35 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ನಾಲ್ಕು ದಿನಗಳ ಬಳಿಕ ಉಡುಪಿಯಲ್ಲಿ ಇಂದು ಕೊರೋನಾ ವರದಿ ಪ್ರಕಟಗೊಂಡಿದೆ. ನಾಲ್ಕು ದಿನಗಳಲ್ಲಿ 845 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ನಾಲ್ಕು ದಿನಗಳಲ್ಲಿ 865 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1703 ಸಕ್ರಿಯ ಪ್ರಕರಣಗಳಿವೆ.

Sponsors

Related Articles

Leave a Reply

Your email address will not be published. Required fields are marked *

Back to top button