ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿತ್ತಾನ್ ಭೇಟಿ…

ಕಾಸರಗೋಡು: ರಷ್ಯ ಯುದ್ಧದಿಂದ ತತ್ತರಿಸಿರುವ ಉಕ್ರೇನ್ ನಲ್ಲಿ ಎಂ ಬಿ ಬಿ ಎಸ್ ವ್ಯಾಸಂಗ ಮಾಡುತ್ತಿರುವ ಕಾಸರಗೋಡು ಜಿಲ್ಲೆಯ ಪಡನ ನಿವಾಸಿ ಎಂ ಬಿ ಖದೀಜ ರವರ ಮನೆಗೆ ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿತ್ತಾನ್ ಭೇಟಿ ಕೊಟ್ಟು ಕುಟುಂಬಸ್ಥರಿಗೆ ದೈರ್ಯ ತುಂಬಿದರು.
ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಸ್ಥಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್, ಕಾಸರಗೋಡು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಎ ಎ ಫೈಸಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಪಡನ ಪಂಚಾಯತ್ ಅಧ್ಯಕ್ಷರಾದ ಅಸ್ಲಂ ಪಡನ, ಸಿದ್ದೀಕ್ ಕೋಕೋ, ರಹೀಂ ಬೀಜದಕಟ್ಟೆ ಉಪಸ್ಥಿತರಿದ್ದರು. ಸಂಸದರು ಸರಕಾರದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.