ಆದಿತ್ಯವಾರ – ದ.ಕ 193 , ಉಡುಪಿ 117 ಹಾಗೂ ರಾಜ್ಯದಲ್ಲಿ 5938 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಆದಿತ್ಯವಾರ) ದ.ಕ ಜಿಲ್ಲೆಯಲ್ಲಿ 193 , ಉಡುಪಿ 117 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 193 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10330 ಕ್ಕೆ ಏರಿಕೆಯಾಗಿದೆ.ಇಂದು 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 310 ಕ್ಕೆ ಏರಿಕೆಯಾಗಿದೆ. ಇಂದು 164 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2343 ಸಕ್ರಿಯ ಪ್ರಕರಣಗಳಿವೆ. 193 ಪ್ರಕರಣಗಳ ಪೈಕಿ 130 ಪ್ರಕರಣಗಳು ಮಂಗಳೂರಿನಿಂದ, 21 ಪ್ರಕರಣಗಳು ಬಂಟ್ವಾಳದಿಂದ, 6 ಪ್ರಕರಣಗಳು ಪುತ್ತೂರಿನಿಂದ, 19 ಪ್ರಕರಣಗಳು ಸುಳ್ಯದಿಂದ , 8 ಪ್ರಕರಣಗಳು ಬೆಳ್ತಂಗಡಿಯಿಂದ ಹಾಗೂ 8 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.

ರಾಜ್ಯದಲ್ಲಿ ಇಂದು 5,938 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,77,814ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನಿಂದ ಇಂದು 68 ಮಂದಿ ಬಲಿಯಾಗಿದ್ದು ರಾಜ್ಯದಲ್ಲಿ ಮೃತರ ಸಂಖ್ಯೆ 4,683ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 4,996 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ 2,77,814 ಪ್ರಕರಣಗಳ ಪೈಕಿ 1,89,564 ಮಂದಿ ಚೇತರಿಸಿಕೊಂಡಿದ್ದಾರೆ. ಇನ್ನು 83,551 ಸಕ್ರಿಯ ಪ್ರಕರಣಗಳಿದ್ದು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿಂದು 2,126 ಪ್ರಕರಣ ಪತ್ತೆಯಾಗಿದ್ದು, ಬಳ್ಳಾರಿ 406, ಬೆಳಗಾವಿ 136, ದಾವಣಗೆರೆ 265, ಕೊಪ್ಪಳ 256, ಶಿವಮೊಗ್ಗ 246, ಕಲಬುರಗಿ 203, ವಿಜಯಪುರ 134, ಹಾಸನ 196, ಧಾರವಾಡ 194, ಉಡುಪಿ 117, ದಕ್ಷಿಣ ಕನ್ನಡ 193, ಗದಗ 182, ಹಾವೇರಿ 150, ಬಾಗಲಕೋಟೆ 139, ತುಮಕೂರು 112, ಚಿಕ್ಕಮಗಳೂರು 126, ಮೈಸೂರು 92, ರಾಯಚೂರು 81, ಚಿತ್ರದುರ್ಗ 71, ಉತ್ತರ ಕನ್ನಡ 108 ಪ್ರಕರಣ ಪತ್ತೆಯಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಇಂದು 85 ಮಂದಿಗೆ ಸೋಂಕು ದೃಢಪಟ್ಟಿದೆ. 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button