ಅರಂತೋಡು- ಕ್ರಿಕೆಟ್ ಪಂದ್ಯಾಟ ಉದ್ಘಾಟನೆ…

ಸುಳ್ಯ:ಗರುಡ ಸ್ಪೋರ್ಟ್ ಕ್ಲಬ್ ವತಿಯಿಂದ 2 ನೇ ವರ್ಷದ ಗರುಡ ಟ್ರೋಫಿ -2021 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮೈದಾನ ದಲ್ಲಿ ಫೆ.21 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಭಳ ವಹಿಸಿದ್ದರು.ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಲಿ ದೀಪ ಬೆಳಗಿಸಿ ಉದ್ಘಾಟಿಸಿದರು.ಕ್ರಿಕೆಟ್ ಅಂಗಣವನ್ನು ಅರಂತೋಡು ತೊಡಿಕಾನ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಮತಿ ಶೋಭಾ ಶೇಖರ ಉಳುವಾರು,ಅರಂತೋಡು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಕಾರ್ಯದರ್ಶಿ ಎ.ತೀರ್ಥರಾಮ ಅಡ್ಕಬಳೆ,ಸಹಕಾರಿ ನಿರ್ದೆಶಕ ನಿಧೀಶ್,ಗರುಡ ಸ್ಪೊರ್ಟ್ಸ್ ಕ್ಲಬ್ ಅಧ್ಯಕ್ಷ ಮಧುಚಂದ್ರ ಮುಂತಾದವರು ಉಪಸ್ಥಿತರಿದ್ದರು .ಮಂಜುನಾಥ ಉಳುವಾರು,ಹಿತೇಶ್ ಗೌಡ,ಗುರುಕಿರಣ್ ರೈ ಸಹಕರಿಸಿದರು. ಮೋಹನ್ ಸ್ವಾಗತಿಸಿದರು .

E95008c7 3554 4fb8 894f 12e6d7a89c27 300x141

4541c1ae B6ab 45e3 B026 D170ef4a976f 300x141

1e66752a 61da 4a71 8c48 Fbeafe53ba61 300x141

Related Articles

Leave a Reply

Your email address will not be published. Required fields are marked *