ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ) ಮುಡಿಪು- ರಜತ ಸಂಭ್ರಮ…

ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ) ಮುಡಿಪು ಇದರ ರಜತ ಸಂಭ್ರಮ ಪ್ರಯುಕ್ತ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ಇದರ ಸಹಯೋಗದೊಂದಿಗೆ ಶ್ರೀ ವಿಶ್ವ ಭಾರತಿ ರಜತ ವೈಭವ ರಾಮಾಯಣ ದಶಪರ್ವ ಯಕ್ಷಗಾನ ತಾಳಮದ್ದಳೆ ಜು.19 ರಿಂದ ಜು.28 ರ ತನಕ 10 ದಿನಗಳ ಪರ್ಯಂತ ತುಳು ಶಿವಳ್ಳಿ ಸಭಾಭವನ ಬಿಸಿ ರೋಡು ಇಲ್ಲಿ ನಡೆಯಲಿದೆ.
ಪ್ರತಿದಿನ ಸಂಜೆ 4 ರಿಂದ ಕಾರ್ಯಕ್ರಮ ನಡೆಯಲಿದೆ. ತಾಳಮದ್ದಳೆ ಉದ್ಘಾಟನೆಯನ್ನು ಯಕ್ಷ ದಶಾವತಾರಿ ಶ್ರೀ ಕೆ ಗೋವಿಂದ ಭಟ್ ಸೂರಿಕುಮೇರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ರಾಜಾರಾಂ ಭಟ್ ಅಧ್ಯಕ್ಷರು ತುಳು ಶಿವಳ್ಳಿ ಸಂಘ ಬಂಟ್ವಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ ಸುಬ್ರಹ್ಮಣ್ಯ ಭಟ್ ಸಜೀಪ ಮಾಗಣೆ ತಂತ್ರಿ, ಉಜಿರೆ ಅಶೋಕ್ ಭಟ್ ವಿದ್ವಾಂಸರು, ಕೈಯೂರು ನಾರಾಯಣ ಭಟ್ ಅಧ್ಯಕ್ಷರು ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ, ಶ್ರೀ ಮೋಹನ ರಾವ್ ಕೊಯಿಲ, ನಿವೃತ್ತ ತಾಶಿಲ್ದಾರರು ಬಂಟ್ವಾಳ, ಶ್ರೀಮತಿ ಸುಮಂಗಲ ರತ್ನಾಕರ ರಾವ್ ನಿರ್ದೇಶಕಿ ನಾಟ್ಯಾರಾದನ ಮತ್ತು ಯಕ್ಷಗಾನ ಕಲಾ ಕೇಂದ್ರರಿ ಉರ್ವ ಮಂಗಳೂರು ಮೊದಲಾದವರು ಭಾಗವಹಿಸಲಿದ್ದಾರೆ. ನಂತರ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಳೆ ಪ್ರಶಾಂತಹೊಳ್ಳ ನೇತೃತ್ವದಲ್ಲಿ ಜರಗಲಿದೆ.

whatsapp image 2024 07 17 at 9.12.12 pm

Related Articles

Back to top button