ಕೇರಳ ರಾಜ್ಯದ ಮಹಿಳಾ ಕಾಂಗ್ರೇಸ್ ಅಧ್ಯೆಕ್ಷೆಯಾಗಿ ನ್ಯಾಯವಾದಿ ಜಬಿ ಮಥಾರ್ ನೇಮಕ…
ಕೇರಳ ಪ್ರದೇಶ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆಯಾಗಿ ನ್ಯಾಯವಾದಿ ಜಬಿ ಮಾಥಾರ್ ಇಶಾಂ ಅವರನ್ನು ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ನೇಮಕ ಮಾಡಿದ್ದಾರೆ.
ಅವರು ಕೆ ಎಸ್ ಯು (ಕೇರಳದ ವಿದ್ಯಾರ್ಥಿ ಘಟಕ) , ಯುವಕ ಕಾಂಗ್ರೇಸ್ ನಲ್ಲಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಯುವಕ ಕಾಂಗ್ರೇಸ್ ನ ಕಾರ್ಯದರ್ಶಿಯಾಗಿ ನಾಲ್ಕು ವರ್ಷಗಳ ಕಾಲ ಕರ್ನಾಟಕ ಉಸ್ತುವಾರಿಯಾಗಿದ್ದರು. ಕೆಪಿಸಿಸಿಯ ಕಾರ್ಯದರ್ಶಿಯಾಗಿ ದುಡಿದಿರುವ ಇವರು ಪ್ರಸ್ತುತ ಆಲುವ ನಗರ ಸಭೆಯ ಉಪಾದ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಎಂ ಎಸ್ ರಾಮಯ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ, ಕೊಚ್ಚಿನ್ ವಿಶ್ವವಿದ್ಯಾನಿಲಯದಲ್ಲಿ ಕಾನೂನಿನ ಸ್ನಾತಕೋತ್ತರ ಪದವಿ ಪಡೆದ ಇವರ ಪತಿ ಕೊಚ್ಚಿನ್ ನ ಪ್ರಮುಖ ವೈದ್ಯರಾದ ಇಶಾಂ. ತಂದೆ ಕೆ ಎಂ ಐ ಮಥಾರ್ ರವರು ಕೆಪಿಸಿಸಿ ಖಜಾಂಜಿ ಹಾಗೂ ಅಲ್ ಇಂಡಿಯಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ. ಅಜ್ಜಂದಿರಾದ ದಿವಂಗತ ಕೆ ಐ ಮಥಾರ್ ಹಾಗೂ ದಿವಂಗತ ಟಿ ಒ ಬಾವರವರು ಕೆಪಿಸಿಸಿ (ಕೇರಳ ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಸಹೋದರ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ದಿವಂಗತ ಸಿ ಎಂ ಇಕ್ಬಾಲ್ ಚೆಮನಾಡ್ ಹಾಗೂ ಅರಂತೋಡು ತೆಕ್ಕಿಲ್ ಜೈಬುನ್ನಿಸಾ ರವರ ಪುತ್ರಿ ಬೀನಾ ಮಥಾರ್ ರವರ ಪತಿ ಶಾಫಿ ಮಾಥಾರ್, ಇವರು ಕೇರಳ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿದ್ದರು. ವಿದೇಶದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಕೆಲವು ಸಮಯ ರಿಲಾಯನ್ಸ್ ಸಂಸ್ಥೆಯಲ್ಲಿ ದುಡಿದಿದ್ದಾರೆ. ಇನ್ನೋರ್ವ ಸಹೋದರ ರಫಿ ಮಾಥಾರ್ ಮಾಥಾರ್ ಸಂಸ್ಥೆಯ ಸಿ ಇ ಒ ಆಗಿದ್ದಾರೆ. ಇವರ ನೇಮಕವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಸ್ವಾಗತಿಸಿ, ಅಭಿನಂದಿಸಿದ್ದಾರೆ.