ಗೂನಡ್ಕ ಬೈಲೆ ಉಳ್ಳಾಕುಲು ದೈವಸ್ಥಾನ – ಕೆಪಿಸಿಸಿ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಕೃಷ್ಣಪ್ಪ ಭೇಟಿ…
ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಉಳ್ಳಾಕುಲು ದೈವಸ್ಥಾನಕ್ಕೆ ಕೆಪಿಸಿಸಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಕೃಷ್ಣಪ್ಪರವರು ಭೇಟಿ ಕೊಟ್ಟು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಮ್ ಶಾಹಿದ್ ತೆಕ್ಕಿಲ್, ಕೆ ಪಿ. ಜಗದೀಶ್ ಕೊಯಿಂತೋಡು , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ನ್ಯಾಯವಾದಿ ಪ್ರಕಾಶ್, ರಾಮಚಂದ್ರ ಕಲ್ಲುಗದ್ದೆ, ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ಟರ್, ನಿವೃತ್ತ ಅರಣ್ಯಇಲಾಖೆಯ ಅಧಿಕಾರಿ ವೀರಪ್ಪ ಗೌಡ,ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಸಿದ್ದಿಕ್ ಕೋಕೋ, ಗಣಪತಿ ಭಟ್, ಮೋಹನ್ ಎಸ್ ಪಿ, ಕರುಣಾಕರ ಎಸ್ ಪಿ, ಜಯರಾಮ್ ಅಬಿರ ಮೊದಲಾದವರು ಉಪಸ್ಥಿತರಿದ್ದರು.