ಬೆಳ್ತಂಗಡಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕ್ಷೇತ್ರವಾರು ಸಂವಾದ ಸಭೆ…
ಬೆಳ್ತಂಗಡಿ: ಬೆಳ್ತಂಗಡಿ ಗ್ರಾಮಾಂತರ ಬ್ಲಾಕ್ ವ್ಯಾಪ್ತಿಯ ಲಾಯಿಲ, ಧರ್ಮಸ್ಥಳ, ಉಜಿರೆ, ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಸಂವಾದ ಸಭೆ ಕಾರ್ಯಕ್ರಮವನ್ನು ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿಯವರು ಏ.26 ರಂದು ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ , ವಿಧಾನ ಪರಿಷತ್ತಿನ ಸದಸ್ಯ ಕೆ.ಹರೀಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಕೋಲ್ನಾಡು ರವರು ಭಾಗವಹಿಸಿದ್ದರು.
ಸಂವಾದದಲ್ಲಿ ಪಂಚಾಯತ್ ಸದಸ್ಯರು, ಮಾಜಿ ಜಿಲ್ಲಾ, ತಾಲೂಕು , ಗ್ರಾಮ ಪಂಚಾಯತ್ ಹಾಗೂ ಪಂಚಾಯತ್ ನ ಸ್ಪರ್ಧಿಸಿದ್ದ ಅಭ್ಯರ್ಥಿಗಳು , ಪಂಚಾಯತ್ ಗಳಲ್ಲಿ, ಗ್ರಾಮ ಸಭೆಗಳಲ್ಲಿ ಆಯ್ಕೆಯಾಗಬೇಕಾದ ಫಲಾನುಭವಿಗಳ ಆಯ್ಕೆ ನಿಯಮಗಳನ್ನು ಪಾಲಿಸುತ್ತಿಲ್ಲ. ಅಧಿಕಾರ ವಿಕೇಂದ್ರಿಕರಣ ಕೇವಲ ಪುಸ್ತಕದಲ್ಲಿ ಮಾತ್ರ ಇದ್ದು ಅಧಿಕಾರಿಗಳು ಸುತ್ತೋಲೆಗಳ ಮೂಲಕ ಹಸ್ತಕ್ಷೇಪ ನಡೆಸುತ್ತಿದ್ದಾರೆ. ವಸತಿ ಯೋಜನೆಯಲ್ಲಿ ಸಾಮಾನ್ಯ ಆಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅಲ್ಪ ಸಂಖ್ಯಾತ, ಪರಿಶಿಷ್ಟ ಜಾತಿ/ ಪಂಗಡದ ಅಭ್ಯರ್ಥಿಗಳನ್ನು ಕೈ ಬಿಡಲಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿಯವರು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ತಿಳಿಸಿದರು.
ಕಳೆದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಗ್ರಾಮ ಪಂಚಾಯತಿ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡಿ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ತಿನ ಇಬ್ಬರೂ ಸದಸ್ಯರನ್ನು ಸಭೆಯು ಅಭಿನಂದಿಸಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಗ್ರಾಮಾಂತರ ಬ್ಲಾಕ್‌ನ ಅಧ್ಯಕ್ಷರಾದ ಶ್ರೀ ರಂಜನ್ ಗೌಡ , ಬೆಳ್ತಂಗಡಿ ನಗರ ಬ್ಲಾಕ್‌ನ ಅಧ್ಯಕ್ಷರಾದ ಶ್ರೀ ಶೈಲೇಶ್ ಕುರ್ತೋಡಿ , ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ನಮಿತಾ, ಬೆಳ್ತಂಗಡಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ , ಮಾಜಿ ಬ್ಲಾಕ್ ಅಧ್ಯಕ್ಷರಾದ ರಾಜಶೇಖರ್ ಅಜ್ರಿ, ರಾಜಶೇಖರ ಮಡಂತ್ಯಾರ್ ಉಪಸ್ಥಿತರಿದ್ದರು.