“ನನಗೂ ಬೇಕು, ನನ್ನ ಮಗನಿಗೂ ಬೇಕು, ನನ್ನ ಮೊಮ್ಮಕ್ಕಳಿಗೂ ಬೇಕು” ಎಂದು ಕೇಳುವವರು, ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನೋಡಿ ಕಲಿಯುವುದು ಬಹಳಷ್ಟಿದೆ…

ಮಧ್ಯಪ್ರದೇಶದಲ್ಲಿ ಹಲವು ದಶಕಗಳ ಕಾಲ ಬಿಜೆಪಿ ಪಕ್ಷದ ಸಂಘಟನೆ ಮಾಡಿ, 4 ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ, ಈಗ ಮತ್ತೊಂದು ಬಾರಿ ಸುಲಭವಾಗಿ ಅವಿರೋಧವಾಗಿ ಮುಖ್ಯಮಂತ್ರಿ ಆಗುವ ಅವಕಾಶ ಇದ್ದರೂ ಕೇಂದ್ರ ಬಿಜೆಪಿ ವರಿಷ್ಠರ ತೀರ್ಮಾನವನ್ನು ಪ್ರೀತಿಯಿಂದ ಗೌರವಿಸಿ ಪಕ್ಷದ ವರಿಷ್ಠರ ಅಪೇಕ್ಷೆಯಂತೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟ ಶಿವರಾಜ್ ಸಿಂಗ್ ಚೌಹಾಣ್ ಅವರ ಪಕ್ಷ ನಿಷ್ಠೆ ಅನುಕರಣೀಯ.
ಇವರು ಮಧ್ಯಪ್ರದೇಶದಲ್ಲಿ ಪ್ರಭಾವಿ ಜನಾಂಗದ ನಾಯಕರಾಗಿದ್ದರು. ಆದರೂ ಸಹ ತಮ್ಮ ಜಾತಿ ಹೆಸರು ಹೇಳಿಕೊಂಡು ಪಕ್ಷದ ವರಿಷ್ಠರನ್ನು ಬೆದರಿಸಲಿಲ್ಲ. ತನಗೆ ಮುಖ್ಯಮಂತ್ರಿ ಸ್ಥಾನ ಕೊಡದೇ ಇದ್ದರೆ ಬಂಡಾಯ ಏಳುತ್ತೇನೆಂದು ಬೆದರಿಕೆ ಹಾಕಲಿಲ್ಲ. ಒಂದು ವೇಳೆ ತನಗೆ ಮುಖ್ಯಮಂತ್ರಿ ಸ್ಥಾನ ಕೊಡದೇ ಇದ್ದರೆ ತನ್ನ ಹಿಂಬಾಲಕರನ್ನು ಬೀದಿಗೆ ಬಿಟ್ಟು ಹೋರಾಟ ಮಾಡಿಸಲಿಲ್ಲ. ತನ್ನ ಜಾತಿಯ ಧಾರ್ಮಿಕ ಮುಖಂಡರ ಮೂಲಕ ಪಕ್ಷದ ಮುಖಂಡರಿಗೆ ಬೆದರಿಕೆ ತಂತ್ರ ಮಾಡಲಿಲ್ಲ. ಪಕ್ಷದ ಪ್ರಮುಖ ಜವಾಬ್ದಾರಿಗಳು ತನ್ನ ಕುಟುಂಬದವರಿಗೇ ತನ್ನ ಹಿಂಬಾಲಕರಿಗೆ ಸಿಗಲೇಬೇಕೆಂದು ಹಠ ಹಿಡಿಯಲಿಲ್ಲ. ಪಕ್ಷ ಇದುವರೆಗೂ ನನಗೆಲ್ಲಾ ಕೊಟ್ಟಿದೆ. ಪಕ್ಷದ ವರಿಷ್ಠರ ತೀರ್ಮಾನವನ್ನು ಗೌರವಿಸಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವೆ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದರು. ಮಧ್ಯಪ್ರದೇಶದಲ್ಲಿ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ತನ್ನ ನೇತೃತ್ವದಲ್ಲಿಯೇ ಆಯ್ಕೆ ಮಾಡಿದ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಅಪ್ಪಟ ದೇಶಭಕ್ತ ಶಿವರಾಜ್ ಸಿಂಗ್ ಚೌಹಾಣ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂತಹ ಪಕ್ಷನಿಷ್ಠೆಯ ನಾಯಕರು ಬಿಜೆಪಿಯಲ್ಲಿ ಇತರ ನಾಯಕರಿಗೂ ಮಾದರಿಯಾಗಿ ನಿಲ್ಲುತ್ತಾರೆ.
ಲೇ: ಶ್ರೀ ಜಯಾನಂದ ಪೆರಾಜೆ

Sponsors

Related Articles

Back to top button