ಉತ್ಕೃಷ್ಟ ಗುಣಮಟ್ಟದ ಶಿಕ್ಷಣ, ತರಬೇತಿ ಮತ್ತು ವೃತ್ತಿಶಿಕ್ಷಣ ಸಾಧನೆಗಳಿಗೆ ಇನ್ನೊಂದು ಹೆಸರು ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ…

ಲೇ: ಎಸ್ ವಿ ಪ್ರಸಾದ್..
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ , ಕೌಶಲ್ಯಾಭಿವೃದ್ಧಿ, ತರಬೇತಿ ಮತ್ತು ಆಕರ್ಷಕ ಉದ್ಯೋಗಾವಕಾಶ ಒದಗಿಸುವ ವಿದ್ಯಾರ್ಥಿಸ್ನೇಹಿ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.
ಉದ್ದೇಶ – ಹಿನ್ನಲೆ -ಮಹತ್ವ:
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಾರ್ವಕಾಲಿಕ ಸಾಮರ್ಥ್ಯವನ್ನು ಉದ್ದೀಪಿಸಿ – ಉತ್ತೇಜಿಸುವ ಮಹತ್ವದ ಉದ್ದೇಶದಿಂದ 2008 ರಲ್ಲಿ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿಸಲ್ಪಟ್ಟಿತು. ಅಂದಿನಿಂದಲೂ ಗುಣಮಟ್ಟದ ಶಿಕ್ಷಣ, ತರಬೇತಿ ಹಾಗೂ ಅತ್ಯುತ್ತಮ ಮೂಲಸೌಕರ್ಯಗಳಿಂದಾಗಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಾ ಬಂದ ವಿದ್ಯಾಸಂಸ್ಥೆ ಕರ್ನಾಟಕ ರಾಜ್ಯದ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಖ್ಯಾತಿ ಗಳಿಸಿತು. ಈ ಸಂಸ್ಥೆ ಈಗ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಯೆನೆಪೋಯ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಯೆನೆಪೊಯ ವಿಶ್ವವಿದ್ಯಾಲಯ ಒಳಗೊಂಡಿರುವ ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಇದರ ಒಡೆತನದಲ್ಲಿದೆ.
ಮೂಡುಬಿದಿರೆಯ ಸರ್ವಾಂಗ ಸುಂದರ ಪರಿಸರದಲ್ಲಿರುವ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ ನವದೆಹಲಿಯ ಎಐಸಿಟಿಇ ಯಿಂದ ಅನುಮೋದನೆಗೊಂಡಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ( VTU ) ಸಂಯೋಜಿತವಾಗಿದೆ.
ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕಷನ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಇನ್ ಫಾರ್ಮೆಷನ್ ಸೈನ್ಸ್ ಇಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್( IoT, CYBER SECURITY INCLUDING BLOCK CHAIN TECHNOLOGY ) ವಿಭಾಗಗಳಲ್ಲಿ ನುರಿತ, ಅನುಭವಸ್ಥ ಮತ್ತು ತಜ್ಞ ಪ್ರಾಧ್ಯಾಪಕ ವರ್ಗದ ಬೋಧನಾ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಗಳಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ (NBA) ಮಾನ್ಯತೆ ದೊರೆತಿದೆ.
ಸೌಲಭ್ಯಗಳು :
1) ಅಪೇಕ್ಷೆಯಿರುವವರಿಗೆ ಬಡ್ಡಿರಹಿತ ಶೈಕ್ಷಣಿಕ ಸಾಲದ ವ್ಯವಸ್ಥೆ.
2) ವಾರ್ಷಿಕ ಶುಲ್ಕವನ್ನು ತಿಂಗಳ ಕಂತುಗಳಲ್ಲಿ ಪಾವತಿಸುವ ವಿಶೇಷ ಸೌಲಭ್ಯ.
3) ಸ್ಕಾಲರ್ ಶಿಪ್ ಸೇರಿದಂತೆ ಹಲವಾರು ವಿದ್ಯಾರ್ಥಿಸ್ನೇಹಿ ಯೋಜನೆಗಳು.
4) ಸುಸಜ್ಜಿತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಲೇಖನ ಸಾಮಾಗ್ರಿಗಳ ಅಂಗಡಿ, ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ, ATM , ಜಿಮ್ , ಫುಡ್ ಕೋರ್ಟ್, ಕೆಫೆ, ಸುತ್ತಮುತ್ತಲಿನ ಎಲ್ಲ ಊರುಗಳಿಗೆ ಸಾರಿಗೆ ಸೌಲಭ್ಯ.
5) ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ ಕ್ರಾಸ್ ಘಟಕ, ರೋಟರಾಕ್ಟ್ ಕ್ಲಬ್, ಫೋಟೋಗ್ರಫಿ ಕ್ಲಬ್, YIT ಬ್ಯಾಂಡ್, ನಿರಂತರ ಕಲಿಕಾ ಘಟಕ, ಎನ್ ಕೋಡರ್ಸ್, ಸೆಂಟರ್ ಫ಼ಾರ್ ಎಡ್ವಾನ್ಸಡ್ ಕಂಪ್ಯೂಟಿಂಗ್, ಸೆಂಟರ್ ಫ಼ಾರ್ MEP ಡಿಸೈನ್ ಏಂಡ್ ಇಂಜಿನಿಯರಿಂಗ್ , ವೃತ್ತಿಪರ ಕೌಶಲ್ಯ ಮತ್ತು ಅಭಿವೃದ್ಧಿ ಕೇಂದ್ರ , ರ‍್ಯಾಗಿಂಗ್ ನಿಗ್ರಹ ಸೆಲ್, ಕುಂದುಕೊರತೆ ನಿವಾರಣಾ ಕೇಂದ್ರ, ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ಸೆಲ್, KSCST-IPR ಸೆಲ್, ಇಂಡಸ್ಟ್ರಿ ಇಂಟರಾಕ್ಷನ್ ಸೆಲ್, ರೊಬೊಟಿಕ್ಸ್ ಮತ್ತು ಆಟೋಮೇಷನ್ ಪ್ರಯೋಗಾಲಯಗಳನ್ನು ಕಾಲೇಜು ಹೊಂದಿದೆ.
ಲಕ್ಷ್ಯ – ಯಶಸ್ಸು:
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಪ್ರತಿಯೊಬ್ಬರೂ ಪ್ರತಿಷ್ಠಿತ ಕಂಪನಿಯಲ್ಲಿ ಸವಾಲಿನ ಉದ್ಯೋಗವನ್ನು ಪಡೆಯುವ ಮತ್ತು ಅದರಲ್ಲಿ ಯಶಸ್ವಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತುದಾರರಿಂದ ವಿವಿಧ ತರಬೇತಿಗಳನ್ನು ನಿಯಮಿತವಾಗಿ ನೀಡಲಾಗುತ್ತದೆ. ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಮತ್ತು ವಿಷಯಾಧಾರಿತ ವಿಚಾರಸಂಕಿರಣಗಳನ್ನು ಆಯೋಜಿಸಲಾಗುತ್ತದೆ. ಇದಕ್ಕಾಗಿಯೇ ತರಬೇತಿ ಮತ್ತು ಉದ್ಯೋಗ ವಿಭಾಗ ( Training & Placement cell ) ವರ್ಷಪೂರ್ತಿ ಯೋಜನೆಗಳನ್ನು ಹಾಕಿಕೊಂಡು ಕಾರ್ಯರೂಪಕ್ಕಿಳಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ವೃತ್ತಿಪರ ಸೇವೆಗಳನ್ನು ಒದಗಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತದೆ.
ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 08258 262733, 262713
ಮೊ: 7349640850, 9686155557











