ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ವತಿಯಿಂದ ಇಫ್ತಾರ್ ಮೀಟ್ ಮತ್ತು ಸನ್ಮಾನ ಕಾರ್ಯಕ್ರಮ…

ಸುಳ್ಯ: ದಕ್ಷಿಣ ಭಾರತದ ಪ್ರತಿಷ್ಠಿತ ವಿದ್ಯಾಕೇಂದ್ರ ಉಮ್ಮಲ್ ಮದಾರಿಸ್ ಜಾಮಿಯಃ ನೂರಿಯಃ ದಲ್ಲಿ 2022 ನೇ ಸಾಲಿನ ವಾರ್ಷಿಕ ಪರೀಕ್ಷೆಯ ಹದೀಸ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಅಹ್ಮದ್ ಕಬೀರ್ ಫೈಝಿ ಅಲ್- ಮ‌‌‌‌‌ಹ್ಬರಿ ಅಜ್ಜಾವರ ಇವರನ್ನು ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯಾಧ್ಯಕ್ಷ ಅಬ್ದುಲ್ಲ ಫೈಝಿ ಉಸ್ತಾದ್ ವಹಿಸಿದರು. ಇಬಾದ್ ಕಾರ್ಯದರ್ಶಿ ಅಬ್ದುಲ್ ಖಾದರ್ ಫೈಝಿ ಐವರ್ನಾಡು ದುವಾ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್ ದ.ಕ ಜಿಲ್ಲಾ ಈಸ್ಟ್ ಕಾರ್ಯದರ್ಶಿ ಅಕ್ಬರ್ ಕರಾವಳಿ, ಸುಳ್ಯ ತಾಲೂಕು ಮದ್ರಸ ಮ್ಯಾನೇಜ್‌ಮೆಂಟ್ ಕೋಶಾಧಿಕಾರಿ ಹಾಜಿ ಎಸ್.ಎ ಹಮೀದ್, ಹಾಜಿ ಅಹ್ಮದ್ ಸುಪ್ರೀಂ, ಹಾಜಿ ಅಹ್ಮದ್ ಪಾರೆ, ಸುಳ್ಯ ಕ್ಲಸ್ಟರ್ ಅಧ್ಯಕ್ಷ ಸಿದ್ದೀಕ್ ಜೀರ್ಮುಖಿ, ರಿಯಾಜ್ ಕಲ್ಲುಗುಂಡಿ, ಕಲಂದರ್ ಎಲಿಮಲೆ, ಮುಹಮ್ಮದ್ ಕುಂಞ ಮೇನಾಲ, ಮುಹಮ್ಮದ್ ಕುಂಞ ಅಡ್ಕ, ಖಲೀಲ್ ಶಾಲೆಕ್ಕಾರ್, ಮುಹಮ್ಮದ್ ಬಿ.ಎ ಮೇನಾಲ, ಇಕ್ಬಾಲ್ ಸುಣ್ಣಮೂಲೆ, ಸುಳ್ಯ ಟೌನ್ ಕಾರ್ಯದರ್ಶಿ ನವಾಜ್ ಸುಪ್ರೀಂ, ಶಹೀದ್ ಪಾರೆ, ಇಕ್ಬಾಲ್ ಸುಳ್ಯ, ತಾಜುದ್ದೀನ್ ಅರಂತೋಡು, ಫೈಝಲ್ ಜೀರ್ಮುಖಿ ಕಯ್ಯುಮ್ ಕಟ್ಟೆಕಾರ್ ,ಕ್ಯಾಂಪಸ್ ಕಾರ್ಯದರ್ಶಿ ರಹೀಮ್ ಅಜ್ಜಾವರ ಮುಂತಾದವರು ಉಪಸ್ಥಿತರಿದ್ದರು.
ವಲಯ ಕಾರ್ಯದರ್ಶಿ ಆಶಿಕ್ ಸುಳ್ಯ ಸ್ವಾಗತಿಸಿ, ವರ್ಕಿಂಗ್ ಕಾರ್ಯದರ್ಶಿ ತಾಜುದ್ದೀನ್ ಪಾಲ್ತಾಡ್ ವಂದಿಸಿದರು.

7e86ae50 3667 4004 9ecb Fa586d00522b 300x169

Related Articles