ಅರಂತೋಡು – ಬಾಲಕ ಹೊಳೆಯಲ್ಲಿ ಮುಳುಗಿ ಮೃತ್ಯು…
ಸುಳ್ಯ: ಅರಂತೋಡು ಕುಕ್ಕುಂಬಳ ಹೊಳೆಗೆ ಸ್ನಾನ ಮಾಡಲು ತೆರಳಿದ ಮಂಗಳೂರಿನ ಬಾಲಕ ಮನ್ವಿತ್ (12) ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಅರಂತೋಡಿನಿಂದ ವರದಿಯಾಗಿದೆ.
ದಾಮೋದರ ಶೆಟ್ಟಿ ಯವರ ಮಗಳನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಗಿತ್ತು. ಅವರ ಮಗ ಮನ್ವಿತ್ ರಜೆಯಲ್ಲಿ ಅಜ್ಜನ ಮನೆಗೆ ಬಂದಿದ್ದು, ಸಂಜೆ ಹೊತ್ತಲ್ಲಿ ಸ್ನಾನ ಮಾಡಲು ನದಿಗಿಳಿದ ಸಂದರ್ಭದಲ್ಲಿ ಈ ಅನಾಹುತ ನಡೆದಿದೆಯೆನ್ನೆಲಾಗಿದೆ.
ಶರತ್ ಅಡ್ಯಡ್ಕ,ನಿಧೀಶ್ ಅರಂತೋಡು,ತಾಜುದ್ದೀನ್ ಅರಂತೋಡು,ಮುನೀರ್ ಸಂಟ್ಯಾರ್,ಫಯಾಜ್ ಪಟೇಲ್,ಸಂಸುದ್ದೀನ್ ಪೇಲ್ತಡ್ಕ ಮೃತದೇಹವನ್ನು ಹೊರತೆಗೆಯಲು ಸಹಕರಿಸಿದರು. ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ವಾರಿಜ ಕುರುಂಜಿ, ಹಂಸ ಕುಕ್ಕುಂಬಳ ,ಸೋಮಶೇಖರ್ ಪೈಕ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.