ಆರೋಗ್ಯ ಅಮೃತ ಅಭಿಯಾನ – ‘ಗ್ರಾಮ ಆರೋಗ್ಯ’ ಕಾರ್ಯಕ್ರಮ…

ಬಂಟ್ವಾಳ: ತಾಲೂಕು ವೀರಕಂಬ ಗ್ರಾಮ ಪಂಚಾಯತ್ ನ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರ ಆರೋಗ್ಯ ತಪಾಸಣೆ ‘ಗ್ರಾಮ ಆರೋಗ್ಯ’ ಕಾರ್ಯಕ್ರಮ ವೀರಕಂಬ ಗ್ರಾಮದ ಬಾಯಿಲ ಅಂಗನವಾಡಿ ಯಲ್ಲಿ ನಡೆಯಿತು.
ರಕ್ತದೊತ್ತಡ ಪರೀಕ್ಷೆ, ಮಧುಮೇಹ ,ಆಮ್ಲಜನಕ , ರಕ್ತಹೀನತೆ ತಪಾಸಣೆ ಮೊದಲಾದವುಗಳನ್ನು ಮಾಡಲಾಯಿತು. ಅಲ್ಲಾ ಭಕ್ಷ, ಗ್ರಾಮ ಪಂಚಾಯತ್ ಅರೋಗ್ಯ ಅಮೃತ ಅಭಿಯಾನ ತಾಲೂಕು ಸಂಯೋಜಕರು, ವೀರಕಂಬ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಹರ್ಷಿತಾ ಹಾಗೂ ಆಶಾ ಕಾರ್ಯಕರ್ತೆ ಶ್ರೀಮತಿ ಕೋಮಲಾಕ್ಷಿ ತಪಾಸಣಾ ಕಾರ್ಯಕ್ರಮ ನಡೆಸಿಕೊಟ್ಟರು. ಬಾಯಿಲ ಅಂಗನವಾಡಿ ಶಿಕ್ಷಕಿ ಜಯಶ್ರೀ, ಸಹಾಯಕಿ ತೇಜಾವತಿ ಸಹಕರಿಸಿದರು.
