ಭಯಂಕೇಶ್ವರ ದೇವಸ್ಥಾನ ಪಾಣೆಮಂಗಳೂರು- ಚಪ್ಪರ ಮುಹೂರ್ತ…
ಬಂಟ್ವಾಳ : ಸುಮಾರು ಏಳುನೂರು ವರ್ಷಗಳ ಇತಿಹಾಸ ಪ್ರಸಿದ್ಧ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ನರಿಕೊಂಬು ಪಾಣೆಮಂಗಳೂರಿನ ಅಷ್ಟಬಂಧ
ಬ್ರಹ್ಮ ಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಲುವಾಗಿ ಚಪ್ಪರ ಮುಹೂರ್ತ ಸಮಾರಂಭವು ಫೆ.25 ರಂದು ದೇವಸ್ಥಾನದ ಪ್ರಾಂಗಣದಲ್ಲಿ ನೆರವೇರಿತು.
ವೇದಮೂರ್ತಿ ವೆಂಕಪ್ಪಯ್ಯ ಭಟ್ ಕರ್ಬೆಟ್ಟು ಹಾಗೂ ಪ್ರಧಾನ ಅರ್ಚಕರಾದ ನಾರಾಯಣ ಮಯ್ಯರು,ಸಹ ಅರ್ಚಕ ಲಕ್ಷಣ ಆಕಾಶೆ,ಪ್ರಸನ್ನ ಹೆಗ್ಡೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಮೂಡಬಿದ್ರೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ,ಉಪಾಧ್ಯಕ್ಷ ರಘು ಸಪಲ್ಯ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷ ಜಗನ್ನಾಥ ಬಂಗೇರ,ಕೋಶಾಧಿಕಾರಿ ಕೆ.ಶಂಕರನಾರಾಯಣ ರಾವ್,ಸಹಸಂಚಾಲಕ ಕೃಷ್ಣಪ್ಪ ಗಾಣಿಗ,ಕೇಶವ ಕೋಡಿ,ನರಸಿಂಹ ಮಯ್ಯ ಬಿಸಿರೋಡ್,ಡಾ.ಆತ್ಮರಂಜನ್ ರೈ ಪಾಣೆಮಂಗಳೂರು,ಗೋವಿಂದ ಪೈ,ನವೀನ ಮಾಣಿಮಜಲು,ವಸಂತ ಪಿ.,ಶ್ರೀ ಶ ರಾಯಸ,ಪುರುಷೋತ್ತಮ ಸಾಲ್ಯಾನ್ ಮೊದಲಾದವರು ಭಾಗವಹಿಸಿದ್ದರು.
ಮಾರ್ಚ್ 2ರಿಂದ 12ರವರೆಗೆ ಬ್ರಹ್ಮ ಕಲಶೋತ್ಸವದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಮಾ.5ರಂದು ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ರಘುನಾಥ ಸೋಮಯಾಜಿ ಪ್ರಸ್ತಾವನೆ ಮಾಡಿ ತಿಳಿಸಿದರು. ಮೋಹನದಾಸ ಕೊಟ್ಟಾರಿ ನಿರೂಪಿಸಿ, ಕಾರ್ಯದರ್ಶಿ ಪದ್ಮನಾಭ ಮಯ್ಯ ಏಲಬೆ ವಂದಿಸಿದರು.