ಅಮೇರಿಕಾದಲ್ಲಿ ಯಕ್ಷಗಾನ ಪ್ರದರ್ಶನ – ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಕಲಾವಿದರಿಗೆ ಶುಭ ಹಾರೈಕೆ…

ಮಂಗಳೂರು: ಅಮೇರಿಕಾಕ್ಕೆ ಯಕ್ಷಗಾನ ಪ್ರದರ್ಶನ ನೀಡಲು ತೆರಳುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಕಲಾವಿದರ ತಂಡದ ನೇತೃತ್ವವನ್ನು ವಹಿಸುತ್ತಿರುವ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರನ್ನು ಅವರ ನಿವಾಸದಲ್ಲಿ ಪಟ್ಲ ಟ್ರಸ್ಟಿನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ಭೇಟಿಯಾಗಿ ಶುಭ ಹಾರೈಸಿದರು.
ತಂಡದ ಎಲ್ಲಾ ಕಲಾವಿದರಿಗೆ ಶುಭ ಹಾರೈಸಿ, ಜಗನ್ಮಾತೆಯ ಕೃಪೆಯಿಂದ ಅವರ ಯಕ್ಷ ಯಾನ ಸುಗಮವಾಗಿ ಸಾಗಲಿ ಎಂದು ಪ್ರಾರ್ಥಿಸಲಾಯಿತು. ಟ್ರಸ್ಟಿನ ಕೇಂದ್ರೀಯ ಸಮಿತಿಯ ಮಾರ್ಗದರ್ಶಕರಾದ ಶ್ರೀ ಪಟ್ಲ ಮಹಾಬಲ ಶೆಟ್ಟಿಯವರು, ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಕೆ. ಭಂಡಾರಿ, ಕೋಶಾಧಿಕಾರಿ ಸುದೇಶ್ ರೈ, ಸಂಘಟನಾ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ರವಿ ಶೆಟ್ಟಿ ಆಶೋಕನಗರ ಮತ್ತು ಪ್ರದೀಪ್ ಆಳ್ವ ಕದ್ರಿ, ಸುರೇಶ್ ಆಚಾರ್ಯ ಅಡ್ಡೂರು ಉಪಸ್ಥಿತರಿದ್ದರು.