ಪೇರಡ್ಕ ಜುಮಾ ಮಸೀದಿಗೆ ರಹೀಂ ಪೇರಡ್ಕರವರಿಂದ ಕಂಪ್ಯೂಟರ್, ಪ್ರಿಂಟರ್, ಕುಡಿಯುವ ನೀರಿನ ಘಟಕ ಕೊಡುಗೆ…

ಸುಳ್ಯ:ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ-ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿಗೆ ಕಂಪ್ಯೂಟರ್, ಪ್ರಿಂಟರ್ ಮತ್ತು ಕುಡಿಯುವ ನೀರಿನ ಘಟಕವನ್ನು ಪೇರಡ್ಕ ಜಮಾಅತ್ ದುಬೈ ಸಮಿತಿಯ ಅಧ್ಯಕ್ಷರು ಹಾಗೂ ಪೇರಡ್ಕ ಜಮಾಅತ್ ನ ಮಾಜಿ ಅಧ್ಯಕ್ಷರಾಗಿದ್ದ ತೆಕ್ಕಿಲ್ ಕುಟುಂಬದ ದಿ| ಅಹ್ಮದ್ ಕುಂಇ’ ಹಾಜಿಯವರ ಸುಪುತ್ರ ರಹೀಂ ಪೇರಡ್ಕರವರು ಜಮಾಅತ್ ನ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಹಸ್ತಾಂತರಿಸಿದರು. ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಟಿ.ಎಂ ಶಹೀದ್ ತೆಕ್ಕಿಲ್ ರವರು. ರಹೀಂ ಪೇರಡ್ಕ ಮಸೀದಿಯ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಿಂದೆಯು ಎರಡು ಲಕ್ಷ ರೂಪಾಯಿ ನೀಡಿರುವುದಲ್ಲದೆ ಮತ್ತು ಮಾಡಿದ ಸಹಾಯ ಸಹಕಾರವನ್ನು ಸ್ಮರಿಸಿ ತಮ್ಮ ತಂದೆಯವರು ಅಧ್ಯಕ್ಷರಾಗಿರುವ ಸಂಧರ್ಭದಲ್ಲಿ ಮಸೀದಿಯ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿದರು. ಖತೀಬರಾದ ಬಹು| ನಈಂ ಫೈಝಿ ದುವಾ ನೆರವೇರಿಸಿದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಟಿ.ಬಿ ಹನೀಫ್, ಕೆ.ಎಮ್ ಉಸ್ಮಾನ್ ಉಪಸ್ಥಿತರಿದ್ದರು.