ರಿಕ್ಷಾಕ್ಕೆ ಹಿಂದಿನಿಂದ ಗುದ್ದಿದ ಕಾರು-ಚರಂಡಿಗೆ ಬಿದ್ದ ರಿಕ್ಷಾ ಚಾಲಕ ಗಂಭೀರ…

ಬಂಟ್ವಾಳ: ಇಂದು ಬೆಳಿಗ್ಗೆ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕದ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಇನ್ನೋವ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ನುಜ್ಜುಗುಜ್ಜಾಗಿ ಚರಂಡಿಗೆ ಬಿದ್ದಿದೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು, ಮತ್ತೋರ್ವ ಪ್ರಯಾಣಿಕ ತೀವ್ರ ಗಾಯಗೊಂಡು ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Sponsors