ಕನ್ನಡ ಭಾಷೆ ಉಳಿದರೆ ಸಾಹಿತ್ಯ ಉಳಿದೀತು- ಡಾ.ವಸಂತ ಕುಮಾರ್ ಪೆರ್ಲ…

ಮಂಗಳೂರು: ಕನ್ನಡ ಭಾಷೆ ಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ ಅನನ್ಯವಾದುದು. ಸಾಹಿತ್ಯ ಉಳಿಯಬೇಕಾದರೆ ಭಾಷೆ ಭದ್ರವಾಗಿರಬೇಕು.ಕನ್ನಡದ ಅಭಿಮಾನ ಮನೆಗಳಿಂದ ಆರಂಭವಾಗಿ ಸ್ಥಳೀಯವಾಗಿ ಸಾಹಿತ್ಯ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹಿರಿಯಕವಿ, ನಿವೃತ್ತ ಆಕಾಶವಾಣಿ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಹೇಳಿದರು.
ಅವರು ಮಂಗಳೂರು ಚಿಲಿಂಬಿಯಲ್ಲಿ ಜಿಲ್ಲಾಧ್ಯಕ್ಷ ಡಾ.ಗೋವಿಂದ ಭಟ್ ಕೊಳ್ಚಪ್ಪೆ ನೇತೃತ್ವದಲ್ಲಿ ನಡೆದ ಮನೆಮನೆಗಳಲ್ಲಿ ಕನ್ನಡ ಅಭಿಯಾನದ ದ್ವಿತೀಯಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅವರು ಮಂಗಳೂರು ಚಿಲಿಂಬಿಯಲ್ಲಿ ಡಾ.ಗೋವಿಂದ ಭಟ್ ಕೊಳ್ಚಪ್ಪೆಯವರ ನೇತೃತ್ವದಲ್ಲಿ ನಡೆದ ಮನೆಮನೆಗಳಲ್ಲಿ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಕ ಸಂಚಾಲಕ ಡಾ.ವಾಮನ ರಾವ್ ಬೇಕಲ್ ಮಾತನಾಡಿ ಕನ್ನಡ ಕಟ್ಟುವ ಕಟ್ಟಾಳುಗಳನ್ನು ಜೋಡಿಸುವುದೇ ಕನ್ನಡ ಜಾಗೃತಿ ಅಭಿಯಾನದ ಉದ್ದೇಶವಾಗಿದೆ.ಕನ್ನಡ ಭಾಷೆ,ಸಂಸ್ಕೃತಿಯನ್ನು ಉಳಿಸಲು ಕನ್ನಡ ಮನಸ್ಸುಗಳು ಒಂದಾಗಬೇಕು. ಹೊಸತಲೆಮಾರಿಗೆ ಚರ್ಚಿಸುವ ವೇದಿಕೆಯಾಗಬೇಕು ಎಂದರು.
ಕರ್ನಾಟಕ ರಾಜ್ಯ ಸಂಚಾಲಕ ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆ ಮಾತನಾಡಿ ಸಾಹಿತಿಗಳ ಸಂಘಟನೆ ಅಗತ್ಯವೆಂದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಬಾಜನರಾದ ಬಿ. ಕೆ. ಮಾಧವ ರಾವ್,”ಸೊಗಸು “ಪುಸ್ತಕ ಬಹುಮಾನಕ್ಕೆ ಭಾಜನರಾದ ಕಥಾಬಿಂದು ಪ್ರಕಾಶನದ ಪಿ. ವಿ. ಪ್ರದೀಪ್ ಕುಮಾರ್, ಆಕಾಶವಾಣಿಯಿಂದ ನಿವೃತ್ತರಾದ ಡೆಪ್ಯೂಟಿ ಡೈರೆಕ್ಟರ್ ಪಿ. ಸೂರ್ಯನಾರಾಯಣ್ ಭಟ್ ಇವರಿಗೆ ಸಾಧಕ ಶ್ರೀ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು.
ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವೈದ್ಯಸಾಹಿತಿ ಗಝಲ್ ಕವಿ ಡಾ. ಸುರೇಶ ನೆಗಳಗುಳಿ ವಹಿಸಿದರು.ಕವಿಗೋಷ್ಠಿಯಲ್ಲಿ ಸತ್ಯವತಿ ಭಟ್ ಕೊಳಚಪ್ಪು, ಲಕ್ಷ್ಮೀ ವಿ. ಭಟ್, ಉಮೇಶ್ ಕಾರಂತ್, ಆಕೃತಿ ಭಟ್, ಅನಿತಾ ಶೆಣೈ, ಸೌಮ್ಯಾ ಅಂಗ್ರಾಜೆ, ಸುಲೋಚನಾ ನವೀನ್, ಪ್ರತಿಭಾ ಸಾಲಿಯಾನ್, ಮನ್ಸೂರ್ ಮೂಲ್ಕಿ, ಕಸ್ತೂರಿ ಜಯರಾಮ್, ಅಪೂರ್ವ ಕಾರಂತ್ ಪುತ್ತೂರು, ಡಾ. ಶಾಂತಾ ಪುತ್ತೂರು, ಜಯಾನಂದ ಪೆರಾಜೆ ಭಾಗವಹಿಸಿದರು. ಡಾ.ವಾಮನ ರಾವ್ -ಸಂದ್ಯಾ ರಾಣಿ ದಂಪತಿ ವಿಶೇಷ ಗೌರವಾರ್ಪಣೆ ನೀಡಿ ಸನ್ಮಾನಿಸಿದರು.
ಸುಲೋಚನಾ ನವೀನ್ ಪ್ರಾರ್ಥಿಸಿ,ಜಿಲ್ಲಾಧ್ಯಕ್ಷ ಡಾ.ಗೋವಿಂದ ಭಟ್ ಸ್ವಾಗತಿಸಿದರು. ರಾಜ್ಯ ಸಂಚಾಲಕಿ ಡಾ.ಶಾಂತಾ ಪುತ್ತೂರು ಪ್ರಸ್ತಾವನೆ ಗೈದರು.ಕಾರ್ಯದರ್ಶಿ ಅಪೂರ್ವ ಕಾರಂತ್, ಕಸ್ತೂರಿ ಜಯರಾಮ್ ನಿರೂಪಿಸಿದರು. ಗಾಯಕಿ ಪ್ರತಿಭಾ ಸಾಲ್ಯಾನ್, ಅನಿತಾ ಶೆಣೈ, ಗ್ರೇಗೋರಿ ತಂಡ ಗಾಯನ ಕಾರ್ಯಕ್ರಮ ನಡೆಸಿ ಕೊಟ್ಟರು. ಸತ್ಯವತಿ ಭಟ್ ವಂದಿಸಿದರು.ಮುಂದಿನ “ಮನೆ ಮನೆ ಕನ್ನಡ ಜಾಗೃತಿ ಅಭಿಯಾನ ಆಗಸ್ಟ್ 9ಕ್ಕೆ ಗೌರವ ಅಧ್ಯಕ್ಷೆ ಬಿ. ಸತ್ಯವತಿ ಭಟ್ ಕೊಳಚಪ್ಪು ನಿವಾಸದಲ್ಲಿ ಎಂದು ಪ್ರಕಟಿಸಿದರು.