ಹನುಮಾನ್ ಚಾಲೀಸಾ -ಗ್ರಂಥ – ಧ್ವನಿಸುರುಳಿ ಲೋಕಾರ್ಪಣೆ…

ಉಡುಪಿ: ಭಾರತದ ಸುಪ್ರಸಿದ್ಧ ಮತ್ತು 77 ವರ್ಷಗಳ ಭಕ್ತಿ ಹಾಗೂ ಸುಗಂಧ ಪರಂಪರೆ ಹೊಂದಿರುವ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು, ಹನುಮ ಜಯಂತಿಯ ಶುಭ ಸಂದರ್ಭಕ್ಕಾಗಿ ಸಿದ್ಧಪಡಿಸಿದ ‘ಹನುಮಾನ್ ಚಾಲೀಸಾ’ ದ ಗ್ರಂಥ ಮಾದರಿಯ ಸಾಂಪ್ರದಾಯಿಕ ಕಿರುಹೊತ್ತಗೆ ಹಾಗೂ ಧ್ವನಿ ಸುರುಳಿಯನ್ನು ಉಡುಪಿಯ ಶ್ರೀ ಪುತ್ತಿಗೆ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು.
ಗೀತಾಮಂದಿರದ ಲಡ್ಡುಕೃಷ್ಣ ಸಾನಿಧ್ಯದಲ್ಲಿ , ಶ್ರೀಪಾದರ ದಿವ್ಯೋಪಸ್ಥಿತಿಯೊ0ದಿಗೆ, ಧ್ವನಿಸುರುಳಿಗೆ ಕಂಠದಾನ ಮಾಡಿದ ಶ್ರೀಮಠದ ವಿದ್ವಾಂಸರಾದ ವಿದ್ವಾನ್ ಕೆ.ವಿ. ರಮಣ್ ಆಚಾರ್ಯ ಹಾಗೂ ವಿದುಷಿ ಅಯನಾ ವಿ. ರಮಣ್ ಹನುಮಾನ್ ಚಾಲೀಸವನ್ನು ಸುಶ್ರಾವ್ಯವಾಗಿ ಪಠಿಸಿದರು.
ಆಶೀರ್ವಚನ ನೀಡಿದ ಶ್ರೀಪಾದರು, ಸಾಂಪ್ರದಾಯಿಕ ದಾರ ಮತ್ತು ಮಣಿಯಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿರುವ ಈ ಪ್ರಾರ್ಥನಾ ಪುಸ್ತಕವು ಭಕ್ತಿ, ನಂಬಿಕೆ ಮತ್ತು ದೈವಿಕ ರಕ್ಷಣೆಯ ನಿರಂತರ ಒಡನಾಡಿಯಾಗಿದೆ. ಪ್ರತಿ ನಿತ್ಯ ಹನುಮಾನ್ ಚಾಲೀಸಾದ ಪಠಣದ ಮೂಲಕ ಈ ಬಾರಿಯ ಹನುಮ ಜಯಂತಿಯು ಹನುಮ, ರಾಮ ಹಾಗೂ ಕೃಷ್ಣ ಭಕ್ತರಿಗೆ, ಅಷ್ಟೇ ಅಲ್ಲದೆ ಸಮಸ್ತ ಆಸ್ತಿಕ ಲೋಕಕ್ಕೆ ಒಂದು ಮಹತ್ವದ ಕೊಡುಗೆಯಾಗಿದೆ ಎಂದು ಹರಸಿದರು.
ಭಕ್ತರು ಮತ್ತು ಆಸಕ್ತರ ಅನುಕೂಲಕ್ಕಾಗಿ ಈ ಹನುಮಾನ್ ಚಾಲೀಸಾವನ್ನು ಕೇಳಲು ಮತ್ತು ಓದಲು ಯೂಟ್ಯೂಬ್ ಸೇರಿದಂತೆ ವಿವಿಧ ಆನ್‌ಲೈನ್ ವೇದಿಕೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ಮೈಸೂರಿನ ಎನ್. ರಂಗರಾವ್ ಅಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಈ ವಿಶೇಷ ಭಕ್ತಿ ಕಾಣಿಕೆಯನ್ನು ನಿರ್ಮಾಣ ಮಾಡಿ ಸಮಾಜಕ್ಕೆ ಅರ್ಪಿಸಿದೆ.

ಪುಸ್ತಕದ ವಿಶೇಷತೆಗಳು:
ವಿನ್ಯಾಸ: ಈ ಹನುಮಾನ್ ಚಾಲೀಸಾ ಹನುಮದ್ ಭಕ್ತರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪುಸ್ತಕವಾಗಿದ್ದು, ಪವಿತ್ರ ಶ್ಲೋಕಗಳನ್ನು ಸಾಂಪ್ರದಾಯಿಕ ತಾಳೆಗರಿಯ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಬಾಳಿಕೆ: ದೀರ್ಘಕಾಲ ಬಾಳಿಕೆ ಬರುವಂತೆ ಮತ್ತು ಹರಿಯದ ಹಾಳೆಗಳಲ್ಲಿ ಶಾಶ್ವತವಾಗಿ ಇರುವಂತೆ ಮುದ್ರಿಸಲಾಗಿದೆ.

ಲಿಪಿಗಳು: ಸುಲಭವಾದ ಪಠಣಕ್ಕೆ ಅನುಕೂಲವಾಗುವಂತೆ ಕನ್ನಡ, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಲಿಪಿಗಳಲ್ಲಿ ಹನುಮಾನ್ ಚಾಲೀಸಾವನ್ನು ನೀಡಲಾಗಿದೆ.

ಧ್ವನಿ ಸುರುಳಿ: ಓದುವಿಕೆ ಮತ್ತು ಪಾರಾಯಣಕ್ಕೆ ಅನುಕೂಲವಾಗುವಂತೆ ಪುರುಷ ಮತ್ತು ಮಹಿಳಾ ಧ್ವನಿಗಳಲ್ಲಿ (ವಿದ್ವಾನ್ ಕೆ.ವಿ. ರಮಣ್ ಆಚಾರ್ಯ ಮತ್ತು ವಿದುಷಿ ಅಯನಾ ವಿ. ರಮಣ್) ಸುಶ್ರಾವ್ಯವಾಗಿ ಮೂಡಿಬರುವಂತೆ ಸಂಯೋಜಿಸಲಾಗಿದೆ.

ಡಿಜಿಟಲ್ ಸೌಲಭ್ಯ: ಈ ಹೊತ್ತಗೆಯಲ್ಲಿ ಕ್ಯೂಆರ್ ಕೋಡ್ (QR Code) ಅಳವಡಿಸಲಾಗಿದ್ದು, ಅದರ ಮೂಲಕ ಧ್ವನಿ ಸುರುಳಿಯನ್ನು ಕೇಳುವ ಸೌಕರ್ಯವಿದೆ.

whatsapp image 2026 03 31 at 4.18.14 pm

whatsapp image 2026 03 31 at 4.18.14 pm (1)

Related Articles

Back to top button