ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಬೀಳ್ಕೊಡುಗೆ ಸಮಾರಂಭ…

ಬಂಟ್ವಾಳ, ಜೂ. 2:Vಕಡು ಬಡತನದ ಮಧ್ಯೆಯೂ ಅವಿಭಕ್ತ ಕುಟುಂಬದ ಜವಾಬ್ದಾರಿಯುತ ಯಜಮಾನನಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಯಕ್ಷ ಪ್ರೇಮಿಯಾಗಿ ಬೆಳೆದವರು ದೈವ ಭಕ್ತರಾದ ತಿಮ್ಮಪ್ಪ ರವರು ಎಂದು ಗ್ರಾ. ಪಂ. ಮಾಜಿ ಅಧ್ಯಕ್ಷ, ಶಾಲಾ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ ನುಡಿದರು.
ಅವರು ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಕಳೆದ 40 ವರ್ಷಗಳಿಂದ ಡಿ – ಗ್ರೂಪ್ ನೌಕರನಾಗಿದ್ದು ವಯೋನಿವೃತ್ತಿ ಹೊಂದಿದ ಪಿ. ತಿಮ್ಮಪ್ಪರವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.
ಕಳೆದ 20 ವರ್ಷಗಳಿಂದ ಅಡುಗೆ ಸಿಬ್ಬಂದಿಯಾಗಿ ಸೇವೆಗೈದುನಿವೃತ್ತಿ ಹೊಂದಿದ ಶ್ರೀಮತಿ ಗಂಗಮ್ಮ ರವರ ಬಗ್ಗೆ ಹಿರಿಯ ಶಿಕ್ಷಕಿ ಶ್ಯಾಮಲಾ ಕೆ. ಮಾತನಾಡುತ್ತಾ ಅತಿ
ಕಡಿಮೆ ಸಂಬಳ ಪಡೆದರೂ ಕೆಲಸದ ಮೇಲಿನ ಶ್ರದ್ಧೆ ಮತ್ತು ವಿದ್ಯಾರ್ಥಿಗಳ ಪ್ರೀತಿಯಿಂದಾಗಿ ಲಾಕ್ ಡೌನ್ ಸಂದರ್ಭದಲ್ಲಿ ಕೂಡ ಕರ್ತವ್ಯ ನಿರ್ವಹಿಸಿ ಬದ್ಧತೆ ಮೆರೆದಿದ್ದಾರೆ ಎಂದು ಕೊಂಡಾಡಿದರು.
ಇದೇ ಸಂದರ್ಭ ಸುಮಾರು 10 ವರ್ಷಗಳಿಂದ ಗೌರವ ಶಿಕ್ಷಕಿಯಾಗಿ ಸೇವೆಗೈದ ಸುಶ್ಮಿತಾ ಎ.ವಿ. ರವರನ್ನು ಗೌರವಿಸಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾಮ ರೊ. ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಕೆ. ಇಬ್ರಾಹಿಂ, ಗ್ರಾ. ಪಂ. ಪಿ.ಡಿ.ಓ. ಗಿರಿಜಾ, ನಿವೃತ್ತ ಶಿಕ್ಷಕರುಗಳಾದ ಬಿ.ಕೆ. ಭಂಡಾರಿ, ಪಿ. ಗಂಗಾಧರ ರೈ, ಎಂ. ಕೆ. ಬಾಲಕೃಷ್ಣ, ಐ. ಜಯಲಕ್ಷ್ಮಿ , ಕೃಷ್ಣಪ್ಪ ನಾಯ್ಕ, ಜಯಾನಂದ ಪೆರಾಜೆ ಶುಭಹಾರೈಸಿದರು .
ಮುಖ್ಯ ಶಿಕ್ಷಕ ಎಸ್ . ಚೆನ್ನಪ್ಪ ಗೌಡ ಸ್ವಾಗತಿಸಿ, ಹಿರಿಯ ಶಿಕ್ಷಕ ಎನ್. ಗಂಗಾಧರ ಗೌಡ ವಂದಿಸಿ, ಹಿಂದಿ ಶಿಕ್ಷಕ ಜಯರಾಮ ಕಾಂಚನ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಪ್ರತಿಮಾ ಮತ್ತು ಅಭಿಲಾಷ್ ಕುಮಾರ್ ಜಿ. ಸಹಕರಿಸಿದರು.

Whatsapp Image 2026 06 02 At 11.52.27 Am 300x99

Related Articles