ದ.ಕ. ಜಿಲ್ಲೆಯಲ್ಲಿ 24 , ಉಡುಪಿ ಜಿಲ್ಲೆಯಲ್ಲಿ 29 ಮಂದಿಯಲ್ಲಿ ಕೊರೊನಾ ದೃಢ…

ಮಂಗಳೂರು:ಇಂದು (ಗುರುವಾರ) ದ.ಕ. ಜಿಲ್ಲೆಯಲ್ಲಿ 24 ಕೊರೊನಾ ಪ್ರಕರಣಗಳು ಹಾಗೂ ಉಡುಪಿ ಜಿಲ್ಲೆಯಲ್ಲಿ 29 ಮಂದಿಯಲ್ಲಿ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
ದ.ಕ. ಜಿಲ್ಲೆಯಲ್ಲಿ ಇಂದು ಮಧ್ಯಾಹ್ನದ ತನಕ 6 ಮಂದಿಯ ವರದಿ ಪಾಸಿಟಿವ್ ಆಗಿತ್ತು. ಈಗ ಮತ್ತೆ 18 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಒಂದೇ ದಿನ 24 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಮಂಗಳೂರಿನ ಮೂಳೂರು ಗ್ರಾಮದ ಬರ್ಕೆ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಮೂಳೂರು ಗ್ರಾಮದ ಬರ್ಕೆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನದ ತನಕ 27 ಮಂದಿಯ ವರದಿ ಪಾಸಿಟಿವ್ ಆಗಿತ್ತು. ಈಗ ಮತ್ತೆ 2 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಒಂದೇ ದಿನ 27 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

Sponsors

Related Articles

Leave a Reply

Your email address will not be published. Required fields are marked *

Back to top button