ದ.ಕ -14 , ಉಡುಪಿ -13 , ಕಾಸರಗೋಡು-3 ಕೊರೊನಾ ಪ್ರಕರಣ ಪತ್ತೆ…
ಮಂಗಳೂರು: ಇಂದು (ಶನಿವಾರ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 , ಉಡುಪಿ ಜಿಲ್ಲೆಯಲ್ಲಿ 13 ಹಾಗೂ ಕಾಸರಗೋಡು ಜಿಲ್ಲೆಯಲ್ಲಿ 3 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದಕ್ಷಿಣ ಕನ್ನಡದಲ್ಲಿ 13 ಮಂದಿ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದವರಾಗಿದ್ದರೆ, ಒಂದು ಪ್ರಕರಣ ಸೋಮೇಶ್ವರ ಗ್ರಾಮದ ಪಿಲಾರ್ ದಾರಂದ ಬಾಗಿಲುವಿನಲ್ಲಿ ವರದಿಯಾಗಿದೆ. 17 ವರ್ಷದ ಬಾಲಕನಿಗೆ ಕೊರೊನಾ ಬಂದಿದೆ. ಇನ್ನು ಇಂದು 184 ಮಂದಿಯ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಉಡುಪಿಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 13 ಮಂದಿಯಲ್ಲಿ ಕೊರೊನಾ ದೃಢವಾಗಿದೆ. ಶನಿವಾರ ಉಡುಪಿ ಜಿಲ್ಲೆಯಲ್ಲಿ 17 ಮಕ್ಕಳು ಸೇರಿದಂತೆ 45 ಮಂದಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಮೇ.19ರಂದು ಕುವೈತ್ ನಿಂದ ಆಗಮಿಸಿದ್ದ ಪಿಲಿಕೋಡ್ ನಿವಾಸಿಯಾಗಿರುವ 33 ವರ್ಷದ ವ್ಯಕ್ತಿಗೆ, ಮೇ.17ರಂದು ದುಬಾಯಿಯಿಂದ ಆಗಮಿಸಿದ್ದ ಮಧೂರು ನಿವಾಸಿಯಾಗಿರುವ 68 ವರ್ಷದ ವ್ಯಕ್ತಿಗೆ ಹಾಗೂ ಮೇ. 21ರಂದು ಮಹಾರಾಷ್ಟ್ರ ದಿಂದ ಬಂದಿದ್ದ 29 ವರ್ಷದ ಚೆಮ್ನಾಡ್ ನಿವಾಸಿಗೆ ಕೊರೊನಾ ದೃಢವಾಗಿದೆ.