ಸುಳ್ಯ- ಗಾಂಧಿನಗರ ಸರಕಾರಿ ಶಾಲೆಯ ಮುಖ್ಯ ದಾರಿ ಬದಲಾವಣೆ ???…
ಸುಳ್ಯ: ಗಾಂಧಿನಗರ ಸರಕಾರಿ ಶಾಲೆಗೆ (ಕರ್ನಾಟಕ ಪಬ್ಲಿಕ್ ಸ್ಕೂಲ್, ಗಾಂಧಿನಗರ) ಕಳೆದ ಹತ್ತಾರು ವರ್ಷಗಳಿಂದ ಇದ್ದ ಮುಖ್ಯ ದಾರಿಯನ್ನು ಇದೀಗ ಮುಚ್ಚಿ ಕಿರಿದುಗೊಳಿಸಲಾಗಿದೆಯಲ್ಲದೇ, ಶಾಲೆಯ ಮತ್ತೊಂದು ಬದಿಯಲ್ಲಿ ಹೊಸ ದಾರಿ ಮಾಡಲಾಗಿದೆ.
ಸುಳ್ಯದ ಗಾಂಧಿನಗರ ಪೇಟೆಯಿಂದ ಶಾಲೆಗೆ ಹೋಗುವ ರಸ್ತೆಯು ಶಾಲೆಯ ಆಟದ ಮೈದಾನದ ಬಲಬದಿಯ ಮೂಲೆಯಲ್ಲಿ ಸೇರಿ, ನಂತರ ಮೈದಾನದ ಬದಿಯಲ್ಲಿಯೇ ಸಾಗಿ ಕೊನೆಗೆ ಶಾಲೆಯ ಎಡಭಾಗದಿಂದಾಗಿ ಶಾಲಾ ಕಟ್ಟಡದ ಮುಂಭಾಗಕ್ಕೆ ಸೇರುತ್ತಿತ್ತು. ಇದು ಗಾಂಧಿನಗರ – ಕಾರ್ಯಾತೋಡಿ ನ.ಪಂ. ರಸ್ತೆಯಾಗಿರುತ್ತದೆ. ಈ ರಸ್ತೆ ಮುಂದುವರಿದು ಕಾರ್ಯಾತೋಡಿ ಬೈಲಿಗೆ ಸಂಪರ್ಕ ಕಲ್ಪಿಸುತ್ತದೆ. ಮಾತ್ರವಲ್ಲದೆ ಇದು ಶಾಲೆಯ ಆರಂಭದಿಂದಲೇ ಇರುವ ರಸ್ತೆಯಾಗಿದೆ.
ಆದರೆ ಈಗ ಶಾಲೆಯ ಸಮೀಪದಿಂದ ಶಾಲೆಗೆ ಹೋಗುವ ಮುಖ್ಯ ದಾರಿಯಲ್ಲಿದ್ದ (ಎಡಬದಿ-ದಕ್ಷಿಣ ದಿಕ್ಕು) ದೊಡ್ಡ ಗೇಟನ್ನು ತೆಗೆದು, ಆವರಣ ಗೋಡೆ ಕಟ್ಟಲಾಗಿದೆ ಹಾಗೂ ಒಂದು ಚಿಕ್ಕ ಗೇಟನ್ನು ಆ ಜಾಗದಲ್ಲಿರಿಸಲಾಗಿದೆ.
ಶಾಲೆಯ ಬಲಭಾಗದಲ್ಲಿ (ಉತ್ತರ ದಿಕ್ಕು) ಹೊಸದಾಗಿ ಕಿರಿದಾದ ಸಂಪರ್ಕ ರಸ್ತೆಯನ್ನು ನಿರ್ಮಿಸಿ, ಗೇಟನ್ನು ಇಡಲಾಗಿದೆ.
ಇದರಿಂದಾಗಿ ಶಾಲೆಗೆ ಹೋಗುವವರು ನಾವೂರು ರೋಡು ಬಳಸಿ, ಮೈದಾನಕ್ಕೆ ಸುತ್ತುವರಿದು ಹೋಗಬೇಕಾಗಿದೆ.