ಇಂಟರ್ನೆಟ್ ಕೇಬಲ್ ಕಳವು – ಆರೋಪಿಗಳ ಬಂಧನ…

ಬಂಟ್ವಾಳ: ಇಂಟರ್ನೆಟ್ ಕೇಬಲ್ ಕಳವು ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ನೇತ್ರತ್ವದಲ್ಲಿ ದಾಳಿ ನಡೆಸಿ ದಸ್ತಗಿರಿ ಮಾಡಲಾಗಿದೆ. ಆರೋಪಿಗಳಿಂದ ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪರಂಗಿಪೇಟೆ ನಿವಾಸಿಗಳಾದ ಹರೀಶ್ ಮತ್ತು ಯೋಗೀಶ್ ಬಂಧಿತ ಆರೋಪಿಗಳು. ಬಂಧಿತರಿಂದ 31ಸಾವಿರ ರೂ ಮೌಲ್ಯದ ಇಂಟರ್ನೆಟ್ ಕೇಬಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ನೆತ್ತರಕೆರೆಯಿಂದ ಕೊಡ್ಮಾನ್ ವರೆಗಿನ ಸುಮಾರು 31 ಸಾವಿರ ಮೌಲ್ಯದ 3000 ಮೀ.ಉದ್ದದ ಇಂಟರ್ನೆಟ್ ಕೇಬಲ್ ನ್ನು ವಿದ್ಯುತ್ ಕಂಬದಿಂದ ಆರೋಪಿಗಳು ಮೇ 23 ನೇ ತಾರೀಖಿನಂದು ಕಳವು ಮಾಡಿದ್ದಾರೆ ಎಂದು ಡಿವೋಸ್ ಕಮ್ಯುನಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ ನ ಮಾಲಕ ಸಂದರ್ಶ್ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಮೇ.29 (ಇಂದು) ಬೆಳಿಗ್ಗೆ ದೂರು ನೀಡಿರುತ್ತಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ನೇತ್ರತ್ವದ ತಂಡ ಸಂಜೆಯ ವೇಳೆ ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button